ಬೀದರ್ :ಕಮಲನಗರ ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವ್ಯಾಪ್ತಿಯೂ ಹೆಚ್ಚಾಗುತ್ತಲೇ ಇದೆ. ಬಹಳ ದಿನಗಳಿಂದ ಚಿತಾಗಾರ ಇರದಿದ್ದರಿಂದ ರೇಲ್ವೆ ವಿಭಾಗದ ಸ್ಥಳದಲ್ಲಿ ಶವಗಳಿಗೆ ಅಗ್ನಿ ನೀಡಿ ಸಂಸ್ಕಾರ ಮಾಡುವ ಪರಿಸ್ಥಿತಿ ಇತ್ತು. ಮಳೆಗಾಲದಲ್ಲಿ ಶವಗಳು ಸಂಪೂರ್ಣವಾಗಿ ಸುಡುತ್ತಿರಲಿಲ್ಲ. ಮತ್ತೆ ಮರುದಿನ ಬಂದು ಬೆಂಕಿ ಹಚ್ಚುವ ಪರಿಸ್ಥಿತಿ ಇತ್ತು. ಸದ್ಯ ಸುಸಜ್ಜಿತ ಚಿತಾಗಾರ ನಿರ್ಮಾಣ ಮಾಡಲಾಗಿದೆ.
'ತಾಲ್ಲೂಕಿನಲ್ಲಿ ಬೇಳಕುಣಿ(ಭೊ)-1, ಚಿಮೇಗಾಂವ-1, ಭವಾನಿ ಬೀಜಲಗಾಂವ-1, ಹಂದಿಕೇರಾ-1, ದಾಬಕಾ-1, ಡಿಗ್ಗಿ-1, ಡೋಣಗಾಂವ-(ಎಂ)-1, ಕಮಲನಗರ-1, ಬಾಲೂರ-1, ಖೇಡ್-1, ಸಂಗಮ-2, ಮುಧೋಳ-1, ತೋರಣಾ-1, ಮುಧೋಳ(ಕ)-1, ಸೋನಾಳ 1 ಸೇರಿ ಒಟ್ಟು 16 ಚಿತಾಗಾರಗಳು ಇವೆ. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳಲ್ಲೂ ಚಿತಾಗಾರ ಮಾಡಿಸುತ್ತೇವೆ' ಎಂದು ತಾ.ಪಂ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ ತಿಳಿಸಿದರು.
ಚಿತಾಗಾರ ನಿರ್ಮಾಣ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ನರೇಗಾ ಯೋಜನೆ ಬಳಸಿಕೊಂಡು ಸುಸಜ್ಜಿತವಾದ ಚಿತಾಗಾರವನ್ನು ನಿರ್ಮಿಸಲಾಗಿದೆ' ಎಂದು ಕಮಲನಗರ ಪಿಡಿಒ ರಾಜಕುಮಾರ ತಂಬಾಕೆ ತಿಳಿಸಿದ್ದಾರೆ.
Kshetra Samachara
21/10/2024 05:44 pm