ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಮನವಿ ಪತ್ರ

ಬೀದರ್ : ಜಿಲ್ಲೆಯಲ್ಲಿ ಸಮಸ್ಯೆಗಳು ನಿಂತ ನೀರಾಗಿ ಸಮಸ್ಯೆ ಸಮಸ್ಯೆಗಳಾಗಿ ಉಳಿದಿವೆ. ಜಿಲ್ಲೆಯ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ನಮ್ಮ ಜಿಲ್ಲೆಯಲ್ಲಿ ಕಾರ್ಮಿಕ ವರ್ಗಕ್ಕೆ, ರೈತರಿಗೆ, ನಾಗರಿಕರಿಗೆ ದಿನನಿತ್ಯ ಸಮಸ್ಯೆಗಳು ಸವಾಲಾಗಿ ನಿಂತಿವೆ.

ಬೀದರ್ ಜಿಲ್ಲೆಯಲ್ಲಿ ಈ ಕೆಳಕಂಡ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಪರಿಹಾರವಾಗುತ್ತಯೋ? ಎಂಬುವುದು ನಮ್ಮ ಜಿಲ್ಲೆಯ ಜನರಿಗೆ ಕಾಡುತ್ತಿದೆ. ನಮ್ಮ ಜಿಲ್ಲೆಯ ಸಮಸ್ಯೆಗಳು, ನಮ್ಮ ಭಾಗದ ಕಲಂ 371 (ಜೆ) ವಿಶೇಷ ಅನುದಾನದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದು. ಆದರೆ ನಮ್ಮ ಜನಪ್ರತಿನಿಧಿ ಎನ್ನಿಸಿಕೊಂಡವರು ನಮ್ಮ ರೈತ ವರ್ಗ, ಕಾರ್ಮಿಕ ವರ್ಗ ಮತ್ತು ನಾಗರಿಕರಿಗೆ ಸಂವಿಧಾನ ಬದ್ಧತೆಯ ಸೌಲಭ್ಯಗಳು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಐತಿಹಾಸಿಕವಾಗಿ ಹೆಸರುವಾಸಿಯಾಗಿ ರೈತ ಮತ್ತು ಕಾರ್ಮಿಕರ ಜೀವಾಳು ಆಗಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಹಳ್ಳಿಖೇಡ (ಬಿ) ತಾ|| ಹುಮನಾಬಾದ ಜಿ|| ಬೀದರ ಇದನ್ನು ಜಿಲ್ಲೆಯ ರಾಜಕೀಯ ಪ್ರತಿನಿಧಿಗಳು ಕುತಂತ್ರ ರಾಜಕೀಯದಿಂದ ಬಂದ್ ಮಾಡಿ ಕಾರ್ಮಿಕರನ್ನು ಬೀದಿ ಪಾಲು ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸುತ್ತಾ, ಕಾರ್ಖಾನೆಯ ಕಾರ್ಮಿಕರಿಗೆ ತ್ವರಿತವಾಗಿ ಅವರಿಗೆ ಸಿಗಬೇಕಾದ ಪೂರ್ಣ ಪ್ರಮಾಣ ಸೌಲಭ್ಯಗಳನ್ನು ಒದಗಿಸಬೇಕು.ಸಾರ್ವಜನಿಕರ ಮೂಲಭೂತ ಸೌಕರ್ಯಗಳಿಗಾಗಿ ಉಪಯೋಗಿಸಬೇಕು ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿದಾಸ ಕೆಂಪೆನೋರ್, ಸಂಸ್ಥಾಪಕ ಉಪಾಧ್ಯಕ್ಷರು ಎಂ.ಡಿ. ಮಸ್ತಾನ ಮುಲ್ಲಾ, ಸಂಸ್ಥಾಪಕ ಕಾರ್ಯಾಧ್ಯಕ್ಷರು ತುಕಾರಾಮ ರಾಗಾಪೂರೆ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಂಗಮೇಶ ಏಣಕೂರ, ಶಿವರಾಜ ನೇಳವಾಳಕರ್

Edited By : PublicNext Desk
Kshetra Samachara

Kshetra Samachara

25/10/2024 06:29 pm

Cinque Terre

720

Cinque Terre

0