ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೈಂಟಿಂಗ್‌ ಮಾಡುವಾಗ ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವು; ಕೊಲೆ ಆರೋಪ

ಬೀದರ್ : ಮನೆಗೆ ಪೈಂಟಿಂಗ್ ಮಾಡುವಾಗ ಮೂರನೇ ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ ಮಂಗಳವಾರ (ಅ.22) ನಡೆದಿದೆ. ಮೃತ ಯುವಕನನ್ನು ಬೀದರ ತಾಲೂಕಿನ ಮಂದಕನಹಳ್ಳಿ ಗ್ರಾಮದ ಇಮಾವೇಲ್ (24 ವ) ಎಂದು ಗುರುತಿಸಲಾಗಿದೆ. ಮೃತ ದೇಹವನ್ನು ಬ್ರೀಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಗಾಂಧಿ ಗಂಜ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವಕ ಮೂರನೇ ಮಹಡಿಗೆ ಹೋಗುವುದಿಲ್ಲ ಎಂದು ಹೇಳಿದ್ದರೂ ಕೂಡ ಒತ್ತಾಯ ಪೂರ್ವಕವಾಗಿ ಕಳುಹಿಸಿದ್ದಾರೆ. ಬಳಿಕ ಆತ ಪೈಂಟಿಂಗ್ ಮಾಡುವಾಗ ಮನೆಯ ಮಾಲೀಕ, ಗುತ್ತಿಗೆದಾರ ಹಾಗೂ ಎಂಜಿನಿಯರ್ ಸೇರಿ ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಈ ಕೂಡಲೇ ಅವರನ್ನು ಬಂಧಿಸಬೇಕು‌ ಎಂದು ಆಗ್ರಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

22/10/2024 04:58 pm

Cinque Terre

7.9 K

Cinque Terre

0

ಸಂಬಂಧಿತ ಸುದ್ದಿ