ತೋರಣಗಲ್ಲು: ಸಂತೋಷ್ ಲಾಡ್ ಮತ್ತು ತುಕಾರಾಮ್ ಅವರು ಶಾಸಕರಾಗುವ ಮೊದಲು ಈ ಕ್ಷೇತ್ರ ಹೇಗಿತ್ತು. ಈಗ ಹೇಗಿದೆ ಎನ್ನುವುದನ್ನು ನೀವು ಪ್ರಾಮಾಣಿಕವಾಗಿ ನೋಡಿದರೆ ಪ್ರತಿಯೊಬ್ಬರೂ ಅನ್ನಪೂರ್ಣಮ್ಮ ಅವರಿಗೆ ಮತ ಹಾಕ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಜನರಲ್ಲಿ ಮನವರಿಕೆ ಮಾಡಿದರು.
ತೋರಣಗಲ್ಲು ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 371ಜೆ ಜಾರಿ ಮಾಡಿದ್ದು ನಾವು. ಇದು ಜಾರಿಯಾಗದಂತೆ ತಡೆದದ್ದು ಬಿಜೆಪಿ. ಈಗ ಯಾವ ಮುಖ ಇಟ್ಟುಕೊಂಡು ಬಿಜೆಪಿ ನಿಮ್ಮ ಮತ ಕೇಳುತ್ತಿದೆ ಎಂದು ಪ್ರಶ್ನೆ ಮಾಡಿದರು.
ತುಕಾರಾಮ್ ಅವರು ಕ್ಷೇತ್ರಕ್ಕಾಗಿ ಕೇಳಿದ ಎಲ್ಲಾ ಅಭಿವೃದ್ಧಿ ಕೆಲಸಗಳಿಗೂ ಮಂಜೂರಾತಿ ನೀಡಿದ್ದೆ. ತುಕಾರಾಮ್ ಕೇಳಿದಷ್ಟು ಅನುದಾನ ಕೊಟ್ಟಿದ್ದೀನಿ. ಆದ್ದರಿಂದ ತುಕಾರಾಮ್ ನಡೆಸುತ್ತಿರುವ ಅಭಿವೃದ್ಧಿ ಪರ್ವವನ್ನು ಯಥಾವತ್ತಾಗಿ ಮುಂದುವರೆಸಲು ಅನ್ನಪೂರ್ಣ ತುಕಾರಾಮ್ ಗೆಲ್ಲಲೇಬೇಕು. ತುಕಾರಾಮ್ ಕೇಂದ್ರದಿಂದ ಅನುದಾನ ತಂದರೆ, ಅನ್ನಪೂರ್ಣಮ್ಮ ರಾಜ್ಯ ಸರ್ಕಾರದಿಂದ ಅನುದಾನ ತರ್ತಾರೆ. ಸಂಡೂರಿಗೆ ಡಬ್ಬಲ್ ಧಮಾಕಾ ಎಂದರು.
PublicNext
08/11/2024 10:49 pm