ಬಳ್ಳಾರಿ: ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಧಗಧಗನೇ ಉರಿದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಬಳಿಯ ಚಿನ್ನಾಪೂರ ಗುಡ್ಡದಲ್ಲಿ ನಡೆದಿದೆ.
ಸಾಯಂಕಾಲ 7 ಗಂಟೆಗೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ ಅಂತ ಹೇಳಲಾಗ್ತಿದೆ. ಈಗಾಗಲೇ ಮೂರರಿಂದ ನಾಲ್ಕು ಕಿಲೋಮೀಟರ್ ನಷ್ಟು ಬೆಂಕಿ ಆವರಿಸಿದ್ದು, ಗುಡ್ಡದಲ್ಲಿ ಕರಡಿ, ಚಿರತೆ, ನವಿಲುಗಳು ಸೇರಿ ಅನೇಕ ಕಾಡು ಪ್ರಾಣಿಗಳಿಗೆವೆ. ಭಾರೀ ಪ್ರಮಾಣ ಬೆಂಕಿ ಹೊತ್ತಿಕೊಂಡಿದ್ರಿಂದ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಕ್ಕೆ ಹಾನಿಯಾಗುವ ಭೀತಿ ಉಂಟಾಗಿದೆ. ಗುಡ್ಡಕ್ಕೆ ಬೆಂಕಿ ಹತ್ತಿರೋ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ನಿರ್ಲಕ್ಷ್ಯ ತೋರಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.
PublicNext
04/02/2025 10:10 pm