ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಕೋಟಿಗಟ್ಟಲೆ ಅನುದಾನ ನೀರಲ್ಲಿ ಹೋಮ, ದುರ್ಗಮ್ಮ ಗುಡಿ ಬ್ರಿಡ್ಜ್ ಕಾಮಗಾರಿ ಕಳಪೆ

ಬಳ್ಳಾರಿ : ನಗರದ ಹೃದಯ ಭಾಗವೆನಿಸಿಕೊಂಡ ದುರ್ಗಮ್ಮ ಗುಡಿಯ ಬ್ರಿಡ್ಜ್ ದುರಸ್ತಿ ಕಾರ್ಯ ಆರಂಭಗೊಂಡು ಕೋಟಿ ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿರುವ ಸಿಸಿ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದ್ದು ಎಲ್ಲೆಂದರಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ಇನ್ನು ಫುಟ್ ಪಾತ್ ಕಾಮಗಾರಿ ಮುಗಿಸಿ ಇದಕ್ಕೆ ಅಳವಡಿಸಿರುವ ಕಂಬಗಳಂತೂ ಉದ್ಘಾಟನೆಗೂ ಮುಂಚೆಯೇ ಅಲುಗಾಡುತ್ತಿವೆ. ಅಲ್ಲಲ್ಲಿ ಬಿದ್ದು ಹೋದ ಕಂಬಗಳಿಗೆ ವೆಲ್ಡಿಂಗ್ ಮಾಡಲಾಗುತ್ತಿದೆ. ಮನೆಯ ಒಳಗೆ ಇಂಟೀರಿಯರ್ ಕೆಲಸಕ್ಕೆ ಬಳಸುವ ಪ್ಲೇವುಡ್ ಗಳಿಂದ ಸುವರ್ಣ ಬಳ್ಳಾರಿ ಎಂಬ ನಾಮಫಲಕಕ್ಕೆ ಬಳಸಿದ್ದು ಬಳ್ಳಾರಿ ಬಿಸಿಲು ಮತ್ತು ಮಳೆಗೆ ಇದು ಎಷ್ಟು ದಿನ ಬಳಕೆಯಲ್ಲಿ ಇರುತ್ತೋ ಎಂದು ಕಾದು ನೋಡಬೇಕಿದೆ.

ಇಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ಬಂದ್ ಮಾಡಿ ಸಾರ್ವಜನಿಕರಿಗೆ ಸಂಚಾರಕ್ಕೆ ಅಡ್ಡಿಯಾಗಿ ಜನವರಿ 8 ಕ್ಕೆ ಕಾಮಗಾರಿ ಉದ್ಘಾಟನೆಯಾಗದೇ ಜನರ ಕೆಂಗಣ್ಣಿಗೆ ಗುರಿಯಾಗಿದೆ. ತಡೆಗೋಡೆಗಳನ್ನು ಜನರೇ ಕಿತ್ತು ಹಾಕಿ ಪ್ರತಿಭಟಿಸಿದ ಘಟನೆಗಳು ನಡೆದವು. ನಂತರ ಜನವರಿ 26 ಕ್ಕೆ ಉದ್ಘಾಟನೆ ಎಂದು ತಿಳಿಸಿ ಉದ್ಘಾಟಿಸದೇ ಫೆಬ್ರವರಿ 9 ಕ್ಕೆ ಉದ್ಘಾಟನೆ ಎಂದು ನಗರ ಶಾಸಕ ಭರತ್ ರೆಡ್ಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಹೊನ್ನುರಸ್ವಾಮಿ ಕೆ.ಟಿ, ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ

Edited By : Vinayak Patil
PublicNext

PublicNext

04/02/2025 12:51 pm

Cinque Terre

24.63 K

Cinque Terre

0