ಅಥಣಿ : ಅಥಣಿ ಪಟ್ಟಣದ ಜೆಎ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆಯನ್ನ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರಾಟೆಯಲ್ಲಿ ಕುಮಾರಿ ರಾಧಿಕಾ ಸದಲಗಿ ಹಾಗೂ ಭುವನೇಶ್ವರಿ ನಂದಿವಾಲೆ, ಕುಸ್ತಿಯಲ್ಲಿ ಕುಮಾರಿ ಅಶ್ವಿನಿ ಕೋಟಿ 60 ಕೆಜಿ ವಿಭಾಗದಲ್ಲಿ, ಶಟಲ್ ಬ್ಯಾಟ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಅನನ್ಯ ದಶವಂತ ಮತ್ತು ಭುವನೇಶ್ವರಿ ನಂದಿವಾಲೆ, ಹಾಗೂ ಅಜೇಯ ಕೊರಬು, ಚೆಸ್ ನಲ್ಲಿ ಕುಮಾರಿ ಭೂಮಿ ಕೊಕಟನೂರ ಅವರುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದೈಹಿಕ ಉಪನ್ಯಾಸಕರಾದ ಪ್ರಮೋದ ಪವಾರ ದೇಸಾಯಿ ಅವರು ತರಬೇತಿ ನೀಡಿದ್ದಾರೆ. ಈ ಎಲ್ಲ ಸಾಧಕರನ್ನು ಪ್ರಾಚಾರ್ಯರಾದ ಎಸ್ ಎಸ್ ಗೌಡರ ಅವರು ಮತ್ತು ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.
Kshetra Samachara
28/09/2022 09:11 pm