ಬೆಳಗಾವಿ: ಬನ್ನಿ ಮುಡಿಯುವ ನಿಮಿತ್ಯ ಬೈಲಹೊಂಗಲ್ ತಾಲೂಕಿನ ಗಿರಿಯಾಲ್ ಕೆ.ವಿ ಗ್ರಾಮದ ಶ್ರೀ ಓಬಳೇಶ್ವರ ಜಾತ್ರೆ ಬಹಳಷ್ಟು ವಿಜೃಂಭಣೆಯಿಂದ ಜರುಗಿತು. ಜಾತ್ರೆಯಲ್ಲಿ ಬೇರೆ ರಾಜ್ಯದ ಗೋವಾ ಮಹಾರಾಷ್ಟ್ರ ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಯ ಬಹುತೇಕ ಜನರು ಜಾತ್ರೆಗೆ ಭಕ್ತಿಯಿಂದ ಆಗಮಿಸಿದ್ದರು.
ಜಾತ್ರೆಯಲ್ಲಿ ಚಿಕ್ಕ ಮಕ್ಕಳ ತೆಂಗಿನಕಾಯಿ ತುಲಾಭಾರ ನಡೆಯಿತು. ನಂತರ ತೆಂಗಿನಕಾಯಿಗಳನ್ನು ಮುಗಿಲಿಗೆ ಎಸೆಯುವ ರಮ್ಯ ನೋಟ ಭಕ್ತಾದಿಗಳ ಗಮನ ಸೆಳೆಯಿತು. ಜಾತ್ರೆಗೆ ಶ್ರೀ ಮುಕ್ತಿಮಠದ ಪೂಜ್ಯರು ಹಾಗೂ ಶಾಸಕರಾದ ಮಹಾಂತೇಶ ದೊಡ್ಡಗೌಡ್ರ ಆಗಮಿಸಿದರು ಜಾತ್ರೆಯಲ್ಲಿ ಸುತ್ತಲಿನ ಗ್ರಾಮದ ಹಿರಿಯರು ಪರಸ್ಪರ ಬನ್ನಿಯನ್ನು ಹಂಚಿಕೊಂಡು ನಾವು ನೀವು ಬಂಗಾರದಂತೆ ಇರೋಣ ಎಂದು ಬನ್ನಿ ವಿನಿಮಯ ಮಾಡಿಕೊಂಡರು.
ಜಾತ್ರೆಯಲ್ಲಿ ಭಜನೆ ನಡೆಯಿತು 9 ಸುತ್ತ ಪಲ್ಲಕ್ಕಿ ಉತ್ಸವ ಜರಗಿತು ನೆರೆಯ ಶ್ರೀ ಮಾರುತಿ ದೇವರು ಮೂರ್ತಿ ಹಾಗೂ ಶ್ರೀ ಓಬಳೇಶ್ವರ ಉತ್ಸವಮೂರ್ತಿಗಳನ್ನು ಪಲ್ಲಕ್ಕಿ ಉತ್ಸವದಲ್ಲಿ ಮೆರವಣಿಗೆ ಮಾಡಲಾಯಿತು. ಈ ದಸರಾ ನಿಮಿತ್ಯ ಮಹಾನಮಿ ನಿಮಿತ್ಯ ಬನ್ನಿ ಮುಡಿಯುವ ಕಾರ್ಯಕ್ರಮ ಈ ಗ್ರಾಮದ ಜಾತ್ರೆಯ ವಿಶೇಷತೆಯಲ್ಲಿ ಒಂದಾಗಿದೆ.
PublicNext
06/10/2022 07:54 pm