ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರುಳಸಿದ್ದ ಮಹಾಸ್ವಾಮಿಗಳಿಗೆ ಮಾಳಿ ಸಮಾಜದಿಂದ ಕಾಯಕಯೋಗಿ ಬಿರುದು

ಅಥಣಿ : ಸುಕ್ಷೇತ್ರ ಅಥಣಿ ಶೆಟ್ಟರಮಠದ ಮಠಾಧಿಪತಿಗಳಾಗಿ ಧಾರ್ಮಿಕವಾಗಿ ಗಮನಸೆಳೆದಿದ್ದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳಿಗೆ ಅಥಣಿ ಮಾಳಿ/ಮಾಲಗಾರ ಸಮಾಜದಿಂದ ಕಾಯಕಯೋಗಿ ಎಂಬ ಬಿರುದನ್ನು ಕೊಟ್ಟು ಗೌರವಿಸಲಾಯಿತು.ಈ ವೇಳೆ ಮಾತನಾಡಿದ ನಿಡಸೂಸಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ತಮ್ಮ ಸೌಮ್ಯ ಸ್ವಭಾವ, ಕಾಯಕದಿಂದ ಗುರುತಿಸಿಕೊಂಡ ಮರುಳಸಿದ್ದ ಶ್ರೀಗಳು ಅಥಣಿ ಜನತೆಗೆ ಬಲು ಅಚ್ಚುಮೆಚ್ಚು ಅವರ ಈ ಸ್ವಾಭಾವಕ್ಕೆ ಸಂದ ಪ್ರತಿಫಲ ಇದು ಎಂದರು.

ಈ ವೇಳೆ ಶೇಗುಣಶಿಯ ಮಹಾಂತಪ್ರಭು ಸ್ವಾಮೀಜಿ, ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಶಶಿಕಾಂತ ಪಡಸಲಗಿ, ಜಂಬಗಿಯ ಸುರೇಶ ಮಹಾರಾಜರು, ಮುಖಂಡರಾದ ಸದಾಶಿವ ಬುಟಾಳಿ, ಗುರನಿಂಗ ಭಾಸಿಂಗಿ, ಗಿರೀಶ ಬುಟಾಳಿ, ಶಿವಾನಂದ ದಿವಾನಮಳ, ಅರುಣ ಭಾಸಿಂಗಿ, ಆನಂದ‌ ಲಗಳಿ, ಪರಶುರಾಮ ಸೋನಕರ, ಬಾಬು ಬಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

24/09/2022 10:24 pm

Cinque Terre

7.32 K

Cinque Terre

0

ಸಂಬಂಧಿತ ಸುದ್ದಿ