ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ತಾಲೂಕು ಆಸ್ಪತ್ರೆಯಲ್ಲಿನ ಅವ್ಯವಹಾರಗಳಿಗೆ ಖಂಡನೆ; ಜೈ ಹೋ‌ ಜನತಾ ವೇದಿಕೆಯಿಂದ ಪ್ರತಿಭಟನೆ

ತಾಲೂಕು ಆಸ್ಪತ್ರೆಯಲ್ಲಿನ ಅವ್ಯವಹಾರಗಳನ್ನು ಖಂಡಿಸಿ ರಾಮದುರ್ಗದಲ್ಲಿ ಜೈ ಹೋ‌ ಜನತಾ ವೇದಿಕೆಯಿಂದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.

ಈ ಹಿಂದೆ, ಹಲವು ಬಾರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ರೋಗಿಗಳಿಂದ ಹಣ ಸ್ವೀಕರಿಸುವುದಲ್ಲದೇ ಮತ್ತು ಖಾಸಗಿಯಾಗಿ ವೈದ್ಯಕೀಯ ಪರೀಕ್ಷೆ ಮಾಡುತ್ತಿದ್ದಾರೆ ಎಂದು ಮೇಲಾಧಿಕಾರಿಗಳಿಗೆ ಸಂಘಟನೆಯಿಂದ ದೂರು‌ ನೀಡಲಾಗಿತ್ತು.

ಆದರೆ ಈ ಬಗ್ಗೆ ಇದುವರೆಗೂ ಮೇಲಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಮತ್ತು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ನಿನ್ನೆಯಿಂದ ಪ್ರತಿಭಟನೆ ನಡೆಸಿದ್ದರು. ಇಂದು ಪ್ರತಿಭಟನೆ ಎರಡನೆ ದಿನಕ್ಕೆ ಕಾಲಿಟ್ಟಿದ್ದು ಇಂದು ಜಿಲ್ಲಾ ಆರೋಗ್ಯ ಅಧಿಕಾರಿ ಆಗಮಿಸುವವರಿಗೂ ನಾವು ಈ ಸ್ಥಳ ಬಿಟ್ಟು ಕದಲುವುದಿಲ್ಲೆಂದು ಪ್ರತಿಭಟನಾಕಾರರು ಸ್ಥಳದಲ್ಲಿಯೇ ಅಡುಗೆ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ.

Edited By :
PublicNext

PublicNext

23/09/2022 12:13 pm

Cinque Terre

25.65 K

Cinque Terre

0

ಸಂಬಂಧಿತ ಸುದ್ದಿ