ತಾಲೂಕಿನ ಕರಗುಪ್ಪಿ ಯಲ್ಲಾಪುರ ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ಬೆಳಗ್ಗೆ ಸಿಲಿಂಡರ್ ಸ್ಫೋಟ ಆಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಗ್ರಾಮದ ಗೌಡ್ರ ಓಣಿಯ ಅಲಗೌಡ ಅಪ್ಪರಾಯಗೌಡ ಪಾಟೀಲ ಎಂಬ ರೈತನ ಮನೆಯಲ್ಲಿ ಅಡುಗೆ ಮಾಡಲು ಓಲೆಯ ಮೇಲೆ ಇಟ್ಟು ಹೊರಗಡೆ ಹೋದ ಸಂದರ್ಭದಲ್ಲಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಈ ದುರಂತ ಸಂಭವಿಸಿದೆ.
50 ಪ್ರತಿಶತ ಮನೆ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ. ಕುಂದರನಾಡಿನ ಅಮರಸಿದ್ದೇಶ್ವರ ಸ್ವಾಮಿಗಳು ಹಾಗೂ ಹುಕ್ಕೇರಿ ತಾಲ್ಲುಕಿನ ತಹಸಿಲ್ದಾರ ಹಾಗು KEB ಅಧ್ಯಕ್ಷರಾದ ಕಲಗೌಡ ಪಾಟೀಲ, ಪಾಚ್ಛಾಪುರ ತಲಾಟೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. 1,50000 ನಗದು ಮತ್ತು ಚಿನ್ನಾಭರಣ ಸುಟ್ಟಿದೆ.
PublicNext
20/09/2022 07:05 pm