ಕುಡಚಿ: ಕುಡಚಿ ಮತಕ್ಷೇತ್ರದ ಶಾಸಕ ಪಿ. ರಾಜೀವ್ ವ್ಯಾಪ್ತಿಯಲ್ಲಿನ ರಸ್ತೆ ಕಾಮಗಾರಿಗಳನ್ನು ಸುಧಾರಿಸುವಂತೆ ಆಗ್ರಹಿಸಿದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ FIR ಹಾಕುವಂತೆ ಶಾಸಕ ಪಿ. ರಾಜೀವ್ ಸೂಚನೆ ನೀಡಿದ ಘಟನೆ ಹಿಡಕಲ್ ಗ್ರಾಮದಲ್ಲಿ ನಡೆದಿದೆ.
ಹಾರೂಗೇರಿ ಪಟ್ಟಣದ ಸಮೀಪದಲ್ಲಿರುವ ಬಸ್ತವಾಡ ಗ್ರಾಮದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಹಾಗೂ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಯುವಕ ಪ್ರಶ್ನಿಸುತ್ತಾನೆ. ಇದಕ್ಕೆ ಗರಂ ಆದ ಶಾಸಕ ಪಿ. ರಾಜೀವ್ ಅವನ ಮೇಲೆ ಕೇಸ್ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇತ್ತ ಯುವಕ ಪ್ರತಿಭಟಿಸುತ್ತಿದ್ದಂತೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೌದು, ಇವತ್ತು ಹಾರೂಗೇರಿ ಪಟ್ಟಣದಲ್ಲಿ ಬಿಜೆಪಿಯ ಕುಡಚಿ ಮಂಡಲವತಿಯಿಂದ ಸೇವಾ ಪಾಕ್ಷಿಕ ಅಭಿಯಾನದಡಿಯಲ್ಲಿ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಡಿಚಿಯ ಶಾಸಕ ಪಿ. ರಾಜೀವ್‌ಗೆ ಕೆಲ ಕಾರ್ಯಕರ್ತರು ವಿವಿಧ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡಿದರು. ಈ ವೇಳೆ ಶಾಸಕ ಹಾಗೂ ಕಾರ್ಯಕರ್ತರಲ್ಲಿ ಮಾತಿನ ಚಕಮಕಿಯಾಗಿದ ಘಟನೆ ನಡೆಯಿತು.
ಶಾಸಕರಿಗೆ ಪ್ರಶ್ನೆ ಮಾಡಿದ ತಪ್ಪಿಗೆ ಕಾರ್ಯಕರ್ತರನ್ನು ಸ್ಥಳಕ್ಕೆ ಹಾಜರಿದ ಪೊಲೀಸರ ವಶಕ್ಕೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಶಾಸಕ ರಾಜೀವ ಕಾರ್ಯಕರ್ತರ ಮೇಲೆ ಕೇಸ್ ಮಾಡುವುದಾಗಿ ಅವಾಜ್ ಹಾಕಿದ ಘಟನೆ ಸಹ ನಡೆಯಿತು. ಶಾಸಕರ ಕಾರ್ಯಕರ್ತರು ಶಾಸಕರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
PublicNext
27/09/2022 08:49 pm