ಬೆಳಗಾವಿ: ಕಲಿಯುಗದಲ್ಲಿ ಆಗುತ್ತಿರುವ ಅತ್ಯಾಚಾರ, ಅನಾಚಾರಗಳನ್ನು ಸಂಹಾರ ಮಾಡಲು ನರೇಂದ್ರ ಮೋದಿ ಶಿವನ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೋಚೆರಿ ಹೇಳಿದರು
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕೊಡಚಿವಾಡ ಗ್ರಾಮದಲ್ಲಿ ಮಾಜಿ ಸೈನಿಕರು, ಯೋಧರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಭಾವಂತ ಮಕ್ಕಳಿಗೆ ಸತ್ಕಾರ, ಲಕ್ಷ್ಮೀ ಆರಾಧನೆ ಆಗಬೇಕು. ಈ ತರದ ಕಾರ್ಯಕ್ರಮಗಳಿಂದ ಮತ್ತಷ್ಟು ವಿದ್ಯಾರ್ಥಿಗಳು ಪ್ರೇರಣೆ ಆಗುತ್ತದೆ ಎಂದರು.
ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಈಗಾಗಲೇ ಮುಜರಾಯಿ ಇಲಾಖೆ ಶಶಿಕಲಾ ಜೊಲ್ಲೆ 25ಲಕ್ಷ ಹಾಗೂ ಮಾಜಿ ಶಾಸಕರು ಹತ್ತು ಲಕ್ಷ ಅನುದಾನ ಕೊಡ್ತೇವಿ ಅಂದಿದ್ದಾರೆ. ದೇಶದಲ್ಲಿ ಕೋವಿಡ್ ಬಂದ ಕಾರಣಕ್ಕೆ ದೇವಸ್ಥಾನ ನಿರ್ಮಾಣಕ್ಕೆ ಅಲ್ಪಾವಧಿ ಹಿನ್ನೆಡೆಯಾಗಿತ್ತು.ಇದೀಗ ಆದಷ್ಟು ಬೇಗ ದೇವಸ್ಥಾನ ನಿರ್ಮಾಣದ ಜೊತೆಗೆ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ಸಂಕಲ್ಪ ಮಾಡುತ್ತೇನೆ ಎಂದರು.
ಇನ್ನೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು ಈಚೆಗೆ ನಡೆಸಿದ ವರದಿ ಆಧಾರದ ಮೇಲೆ ಭಾರತ ಐದನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಭಾರತ ಒಂದನೇ ಸ್ಥಾನ ಪಡೆದು ಸಾಮಾಜಿಕ, ಆರ್ಥಿಕವಾಗಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಸದ್ಯ ಜಗತ್ತಿನ ಉಗ್ರ ತಾಂಡವ ಆಡ್ತಿದೆ. ಅದನ್ನು ಸಂಹಾರ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡ್ತಿದ್ದಾರೆ. ನರೇಂದ್ರ ಮೋದಿ ಶಿವನ ರೂಪದಲ್ಲಿ ಕೆಲಸ ಮಾಡ್ತಿದ್ದಾರೆ. ಕಲಿಯುಗದಲ್ಲಿ ಆಗುವ ಅತ್ಯಾಚಾರ-ಅನಾಚಾರಗಳನ್ನ ತಡೆಯಲು ಮತ್ತೊಮ್ಮೆ ಜನ್ಮತಾಳಿ ಬರುತ್ತೇನೆ. ಸತ್ಯಕ್ಕೆ ಬೆಲೆ ಕೊಡ್ತೀನಿ ಧರ್ಮವನ್ನು ಉಳಿಸುತ್ತೇನೆ ಎಂದು ಶ್ರೀಕೃಷ್ಣ ದೇವರು ಹೇಳಿದ್ದರು.ಇವತ್ತು ಶ್ರೀಕೃಷ್ಣ ಹೇಳಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಸತ್ಯ-ಧರ್ಮವನ್ನು ಉಳಿಸುತ್ತಿದ್ದಾರೆ ಎಂದರು.
PublicNext
06/10/2022 10:39 pm