ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: SC, ST ಕುಂದು ಕೊರತೆ ಸಭೆಗೆ ಶಾಸಕ ಗೈರು ಭುಗಿಲೆದ್ದ ಆಕ್ರೋಶ

ಅಥಣಿ: ಅಥಣಿಯಲ್ಲಿ ಇಂದು ಜರುಗಿದ ಎಸ್ಸಿ ಎಸ್ಟಿ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಸ್ಥಳೀಯ ಶಾಸಕರು ಹಾಜರಿರಬೇಕೆಂಬ ನಿಯಮ ಇದ್ದರೂ ಅಥಣಿ ಹಾಗೂ ಕಾಗವಾಡ ಶಾಸಕರು ಹಾಜರಿಲ್ಲಾ, ಇದು ಕೇವಲ ಕಾಟಾಚಾರಕ್ಕೆ ಸೀಮಿತವಾದ ಸಭೆ ಎಂದು ನ್ಯಾಯವಾದಿ ಸುನೀಲ ವಾಘಮೋರೆ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯ ಸೇರಿದಂತೆ ಸರ್ಕಾರಿ ಕಛೇರಿಗಳಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸದಿರುವ ಬಗ್ಗೆ ಅಧಿಕಾರಿಗಳು ಉತ್ತರಿಸುವಂತೆ ಪಟ್ಟು ಹಿಡಿಯುತ್ತಿದ್ದಂತೆ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬಳಿಕ ನ್ಯಾಯವಾದಿ ಸುನೀಲ ವಾಘಮೋರೆ ಅವರ ಪ್ರಶ್ನೆಗೆ ಅಥಣಿ ತಹಶಿಲ್ದಾರ ಮತ್ತು ಸಮಾಜಕಲ್ಯಾಣ ಅಧಿಕಾರಿಗಳು ಉತ್ತರಿಸುತ್ತ ಮುಂದಿನ ಸಭೆಯಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸುವ ಭರವಸೆ ನೀಡಿದರು.

ಮುಂದುವರೆದು ಸಭೆಯಲ್ಲಿ ನೆರೆ ಸಂತ್ರಸ್ಥರು, ಸಣ್ಣ ರೈತರ ವಿದ್ಯುತ್ ಸಮಸ್ಯೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಈ ಎಲ್ಲ ಸಮಸ್ಯೆಗಳನ್ನು ಮುಂದಿನ ಸಭೆ ಒಳಗಾಗಿ ಎಲ್ಲ ಪರಿಹರಿಸುವುದಾಗಿ ಅಥಣಿ ತಹಶಿಲ್ದಾರ್ ಸುರೇಶ ಮುಂಜೆ ಭರವಸೆ ನೀಡಿದರು

ಈ ಸಭೆಯಲ್ಲಿ ಪಂಡಿತ್ ನೂಲಿ, ಮಂಜು ಹೋಳಿಕಟ್ಟಿ, ಶಶಿ ಬಾಡಗಿ, ರಾಮ ಮರಳೆರ, ಮಿಥೇಶ್ ಪಟ್ಟಣ, ದಯಾನಂದ ವಾಘಮೋರೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

28/09/2022 06:13 pm

Cinque Terre

35.36 K

Cinque Terre

0

ಸಂಬಂಧಿತ ಸುದ್ದಿ