ಖಾನಾಪೂರ : ಮಾಜಿ ಶಾಸಕ ಅರವಿಂದ್ ಚಂದ್ರಕಾಂತ್ ಪಾಟೀಲ್, ನಂದಗಡದಿಂದ ಖಾನಾಪೂರಕ್ಕೆ ತೆರಳುವ ಸಮಯದಲ್ಲಿ
ಮಲ್ಲಪ್ರಭಾ ಸೇತುವೆಯ ಮೇಲೆ ಮಂತುರ್ಗಾ ಗ್ರಾಮದ ರೇಣುಕಾ ಎಂಬ ಮಹಿಳೆ ಅಪಘಾತಕ್ಕೀಡಾಗಿದ್ದನ್ನ ಗಮನಿಸಿ, ಸಹಾಯಕ್ಕೆ ಮುಂದಾಗಿದ್ದಾರೆ.
ಅಪಘಾತಕ್ಕೀಡಾಗಿದ್ದ ಮಹಿಳೆಯನ್ನು ಖಾನಾಪೂರ ತಾಲ್ಲೂಕು ಆಸ್ಪತ್ರೆಗೆ ತಮ್ಮ ಕಾರಿನಲ್ಲಿ ಕರೆದೊಯ್ದು ಚಿಕಿತ್ಸೆಯನ್ನು ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ . ಇನ್ನು ಮಾಜಿ ಶಾಸಕರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ಸೂಚಿಸಿದ್ದಾರೆ.
- ನಾಗೇಶ್ ನಾಯ್ಕರ
Kshetra Samachara
07/10/2022 11:59 am