ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹಾರ ನಿಷೇಧ ಆದೇಶ ಉಲ್ಲಂಘಿಸಿ ಶಿಕ್ಷಕರ ದಿನಾಚರಣೆ!; ಡಿಡಿಪಿಐ ಖಡಕ್‌ ಎಚ್ಚರಿಕೆ

* ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್

ಬೆಳಗಾವಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ- ತುರಾಯಿ ಇತರ ದುಬಾರಿ ವೆಚ್ಚದ ಉಡುಗೊರೆ ನೀಡುವುದನ್ನು ನಿಷೇಧಿಸಿದ ಸರಕಾರದ ಆದೇಶವನ್ನು ಅಥಣಿ ಶಾಸಕರ ಸಮ್ಮುಖದಲ್ಲಿಯೇ ಅಥಣಿ ತಾಲೂಕಾಡಳಿತ ಉಲ್ಲಂಘಿಸಿದ ಘಟನೆ ಅಥಣಿಯಲ್ಲಿ ಶಿಕ್ಷಕರ ದಿನಾಚರಣೆಯಂದು ಜರುಗಿತ್ತು.

ಆದರೆ, ಈ ಸುದ್ದಿ ಮಾತ್ರ ಯಾರಿಗೂ ಗೊತ್ತಿಲ್ಲವೇನೋ ಅಥವಾ ಹೋಗಲಿ ಬಿಡಿ ಅಂತಾ ಬಿಟ್ಟರೇನೋ ನಮಗೆ ಗೊತ್ತಿಲ್ಲ. ಆದರೆ, ಸಣ್ಣದು ಅಥವಾ ದೊಡ್ಡದೋ 'ತಪ್ಪು ತಪ್ಪೇ' ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾತ್ರ ತಾಲೂಕಾಡಳಿತ ಮಾಡಿದ ತಪ್ಪನ್ನು ಮುಲಾಜು ಇಲ್ಲದೆ "ಸರಕಾರದ ಆದೇಶ ಗಾಳಿಗೆ" ಎಂಬ ಶೀರ್ಷಿಕೆಯಡಿ ಪ್ರಸಾರ ಮಾಡಿತ್ತು.

ಸರ್ಕಾರದ ಕಾರ್ಯಕ್ರಮಗಳಲ್ಲಿ ಹಾರ- ತುರಾಯಿ, ದುಬಾರಿ ಬೆಲೆಯ ಉಡುಗೊರೆ ನೀಡುವುದನ್ನು ನಿಷೇಧಿಸಿ ಮುಖ್ಯಮಂತ್ರಿಯವರು ಕೆಲ ದಿನಗಳ ಹಿಂದೆಯೇ ಆದೇಶ ಹೊರಡಿಸಿದ್ದರು. ಬದಲಿಗೆ ಪುಸ್ತಕ ಉಡುಗೊರೆಯಾಗಿ ನೀಡಬೇಕು ಎಂದೂ ಸಹ ಆದೇಶ ಹೊರಡಿಸಿದ್ದರು. ಆದರೆ, ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ತಾಲೂಕಾಡಳಿತ ಅದ್ಧೂರಿಯಾಗಿ ಶಿಕ್ಷಕರಿಗೆ ಪುಸ್ತಕದ ಬದಲು ಹಾರ- ತುರಾಯಿ ಕೊಟ್ಟು ಅದ್ಧೂರಿಯಾಗೇ ಕಾರ್ಯಕ್ರಮ ಮಾಡಿದ್ದರು!

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹಾಗೂ ತಹಶೀಲ್ದಾರ್ ಸುರೇಶ‌‌ ಮುಂಜೆ ಅವರು ಖುದ್ದಾಗಿ ಮುಂದೆ ನಿಂತು ಪುಸ್ತಕ ಕೊಡುವುದರ ಬದಲಿಗೆ ಹಾರ- ಶಾಲು, ಸ್ಮರಣಿಕೆ‌‌ ಕೊಟ್ಟು ಸನ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ‌ನೆಕ್ಟ್ ಮುಲಾಜಿಲ್ಲದೆ ವರದಿ ಮಾಡಿತ್ತು.

ಇದಕ್ಕೆ ಎಚ್ಚೆತ್ತುಕೊಂಡ ಚಿಕ್ಕೋಡಿ ಡಿಡಿಪಿಐ ಮನೋಹರ ಹಂಚಾಟೆ ಖಡಕ್ ವಾರ್ನ್ ಮಾಡಿ‌, ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಮತ್ತು ಮುಂದೆ ಈ ತರಹದ ಘಟನೆಗಳಿಗೆ ಶಿಕ್ಷಕರು ಕಾರಣವಾದ್ರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತೀವ್ರ ಎಚ್ಚರಿಕೆ ನೀಡಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಮೂಲಕ ಅವರು ಹಾರ- ತುರಾಯಿ ಹಾಕಿಸಿಕೊಂಡ ಶಿಕ್ಷಕರಿಗೆ ವಾರ್ನ್ ಮಾಡಿದ್ದಾರೆ.

Edited By : Manjunath H D
PublicNext

PublicNext

11/09/2022 09:37 am

Cinque Terre

31.9 K

Cinque Terre

1

ಸಂಬಂಧಿತ ಸುದ್ದಿ