ಅಥಣಿ: ಕೆಲ ತಿಂಗಳ ಹಿಂದೆ ಸ್ಥಳೀಯ ಅಂಬೇಡ್ಕರ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ 21 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದಿತ್ತು. ಆ ಸಂದರ್ಭದಲ್ಲಿ ಹರಾಜುದಾರರ ಹೊಂದಾಣಿಕೆ ಪರಿಣಾಮ ಕೇವಲ 88 ಲಕ್ಷ ರೂ.ಗಳ ಆದಾಯ ಗಳಿಕೆಯಾಗಿತ್ತು. ಹೀಗಾಗಿ ಕೆಲ ಪುರಸಭಾ ಸದಸ್ಯರು ತಕ್ಷಣ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಅವರ ಮನವಿ ಮೇರೆಗೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಸ್ಥಳೀಯ ಪುರಸಭಾ ಮುಖ್ಯಾಧಿಕಾರಿ ಕಾರಿಗಳೊಂದಿಗೆ ಚರ್ಚಿಸಿ ವಾಣಿಜ್ಯ ಮಳಿಗೆಗಳ ಮರು ಹರಾಜು ಪ್ರಕ್ರಿಯೆಗೆ ಸೂಚಿಸಿದರು.
ನಿನ್ನೆ ನಡೆದ ಮರು ಹರಾಜು ಪ್ರಕ್ರಿಯೆಯಲ್ಲಿ 25 ಲಕ್ಷ ರೂ.ಗಳ ಅತಿ ಹೆಚ್ಚು ಠೇವಣಿಗೆ ವಾಣಿಜ್ಯ ಮಳಿಗೆ ಹರಾಜಾಯಿತು. ಅಥಣಿ ಪುರಸಭೆಗೆ ಹೆಚ್ಚುವರಿ ಆದಾಯ ಬಂದ ಹಿನ್ನೆಲೆಯಲ್ಲಿ ದೂರು ನೀಡಿದ ಪುರಸಭಾ ಸದಸ್ಯರು ಹರ್ಷ ವ್ಯಕ್ತ ಪಡಿಸಿದರು. ಹಿಂದಿನ ಹರಾಜು ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ಪುರಸಭಾ ಸದಸ್ಯರಾದ ಮೃಣಾಲಿನಿ ದೇಶಪಾಂಡೆ, ಪ್ರಮೋದ ಬಿಳ್ಳೂರ, ವಿನಯ ಪಾಟೀಲ ಸೇರಿದಂತೆ ಅನೇಕರು ದೂರು ನೀಡಿದ್ದರು.
ಇಂದಿನ ಹರಾಜು ಪ್ರಕ್ರಿಯೆ ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ ನೇತೃತ್ವದಲ್ಲಿ ನಡೆಯಿತು.
Kshetra Samachara
13/10/2022 09:17 pm