ಬೆಳಗಾವಿ: ಬೈಲಹೊಂಗಲ ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಗೆ ಬಡಾವಣೆಗಳಲ್ಲಿ ಗಟಾರು ತುಂಬಿ ರಸ್ತೆ ಮೇಲೆ ನೀರು ತುಂಬಿಕೊಂಡಿದೆ. ಪಟ್ಟಣದಲ್ಲಿರವ ದೊಡ್ಡಕೆರೆಯನ್ನು ಸರ್ಕಾರ ಕೋಟ್ಯಾಂತರ ರೂ ವೆಚ್ಚ ಮಾಡಿ ಅಭಿವೃದ್ದಿ ಪಡಿಸುತ್ತಿದ್ದರೆ, ಇತ್ತ ಪಕ್ಕದ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಸಿಡಿ ಮತ್ತು ಚರಂಡಿ ನಿರ್ಮಾಣ ಮಾಡಿರುವುದರಿಂದ ಮಳೆಯ ನೀರು ಮನೆಯ ಒಳಗಡೆ ನುಗ್ಗುತ್ತಿದೆ.
ಕುರಿತು ಹಲವಾರು ಬಾರಿ ಶಾಸಕರಿಗೆ ಮತ್ತು ಪುರಸಭೆ ಅಧಿಕಾರಿಗಳ ದೂರು ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಮಂಜುನಾಥ ಎಂಬುವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ರೋಧನೆ ಅನುಭವಿಸುತ್ತಿದ್ದೆವೆ. ಈ ಕುರಿತು ಹಲವಾರು ಪುರಸಭೆ ಅಧಿಕಾರಿಗಳಿಗೆ ಮತ್ತು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮನವಿ ಮಾಡಿದಾಗ ಶಾಸಕರು ಮನೆಗೆ ಭೇಟಿ ನೀಡಿ ಸಮಸ್ಯೆಯನ್ನು ಇತ್ಯರ್ಥ ಪಡಿಸುವದಾಗಿ ಭರವಸೆ ನೀಡಿ ಹೋದವರು ಮತ್ತೇ ಇತ್ತ ತಿರುಗಿ ನೋಡಿಲ್ಲ,
ನಮ್ಮ ಸಮಸ್ಯೆಯನ್ನು ಯಾರು ಬಳಿ ಹೇಳಬೇಕು ಎನ್ನುವದೇ ಗೊತ್ತಾಗುತ್ತಿಲ್ಲ. ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಮನೆಯಲ್ಲಿ ಹಾವು, ವಿಷಜಂತುಗಳು, ತ್ಯಾಜ್ಯ ವಸ್ತುಗಳು ಬರುತ್ತಿವೆ. ಇದರಿಂದ ಆರೋಗ್ಯದ ದುಷ್ಟಪರಿಣಾಮ ಬೀರುತ್ತಿದೆ. ಕೂಡಲೇ ಸ್ವಚ್ಚತೆ ಕೈಗೊಳ್ಳಬೇಕಾಗಿದೆ ಪುರಸಭೆ ಕೂಡಲೆ ಚರಂಡಿ ಸ್ವಚ್ಚತೆಗೆ ಮುಂದಾಗಬೇಕೆಂದು ನಾಗರೀಕರು ಒತ್ತಾಯಿಸಿದ್ದಾರೆ.
PublicNext
01/10/2022 06:47 pm