ಬೆಳಗಾವಿ: ಕಳೆದ ರಾತ್ರಿ ಬಿಟ್ಟು ಬಿಡದೆ ಸುರಿದ ಮಳೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಯಲ್ಲಮ್ಮದೇವಿ ದೇವಸ್ಥಾನ ಜಲ ದಿಗ್ಬಂಧನಗೊಂಡಿದೆ.
ಗುರುವಾರ ರಾತ್ರಿ ಸತತವಾಗಿ ನಾಲ್ಕು ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ದೇವಸ್ಥಾನದ ಮುಂಭಾಗ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿದು ದೇವಸ್ಥಾನದ ಒಳಗೆ ಮಳೆ ನೀರು ನುಗ್ಗಿದೆ. ಹಠಾತ್ತಾಗಿ ಹಳ್ಳದಲ್ಲಿ ನೀರು ಬಂದಿದ್ದರಿಂದ ವ್ಯಾಪಾರಸ್ಥರಿಗೆ ತೀವ್ರ ಸಂಕಷ್ಟ ಬಂದೊದಗಿದೆ.
ಕೆಲ ತಿಂಗಳ ಹಿಂದೆಯೇ ದೇವಸ್ಥಾನದಲ್ಲಿ ನೀರು ನುಗ್ಗಿದ್ದು ಈಗ ಮತ್ತೆ ಬಂದ ನೀರಿನ ಮಧ್ಯದಲ್ಲಿ ಶಕ್ತಿ ದೇವತೆಗೆ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ನೀರಿನಲ್ಲಿ ಅಲ್ಪ ಪ್ರಮಾಣದ ಒಳಹರಿವು ಇರುವುದರಿಂದ ಭಕ್ತರು ದೂರಿನಿಂದಲೇ ದೇವತೆಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
PublicNext
30/09/2022 01:47 pm