ಬೆಳಗಾವಿ: ಬೈಲಹೊಂಗಲ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಪಟ್ಟಣದ ಮುರಕೀಭಾಂವಿ ರಸ್ತೆಯ ಮೂಲಕ ಹರಿದು ಬರುತ್ತಿರುವ ರಭಸದ ನೀರಿಗೆ ಇಂಚಲ ಕ್ರಾಸ ಬಳಿ ಗಟಾರ್‌ಗಳು ಬ್ಲಾಕ್ ಆಗಿದ್ದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ಇಂಚಲ ರಸ್ತೆ, ಕೇಂದ್ರ ಬಸ್ ನಿಲ್ದಾಣ, ದೀಪಾ ಹೋಟೆಲ್ ಬಳಿ ಅಪಾರ ಪ್ರಮಾಣ ನೀರು ನಿಂತು ವಾಹನ ಸವಾರರು ಪರದಾಡಿದರು.
ಇದೆ ವೇಳೆ ಸಾಣಿಕೊಪ್ಪ ಹತ್ತಿರದ ಹಳ್ಳದಲ್ಲಿ ಯುವಕನೋರ್ವ್ ಬೈಕ್ ಸಮೇತ ತೇಲಿ ಹೋದ ಘಟನೆ ಜರುಗಿದೆ. ರಭಸವಾಗಿ ಹರಿಯುವ ನೀರಿನಲ್ಲಿ ಹಳ್ಳ ದಾಟಲು ದುಸ್ಸಾಹಾಸಕ್ಕೆ ಇಳಿದು ಹಳ್ಳದ ಮಧ್ಯೆ ರಭಸವಾಗಿ ಹರಿಯುವ ನೀರಿನಲ್ಲಿ ಬೈಕ್ ಸಮೇತ ತೇಲಿಹೋಗಿದ್ದ,ಕೂಡಲೇ ನೀರಿನಲ್ಲಿ ಗಿಡ ಗಂಟಿ ಹಿಡಿದು ಹರಸಾಹಸ ಪಟ್ಟು ಮೇಲೆ ಬಂದು ಅದೃಷ್ಟವಶಾತ್ ಪಾರಾಗಿದ್ದಾನೆ.
PublicNext
12/10/2022 10:40 pm