ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪಟ್ಟು ಬಿಟ್ಟ ಗೋವಾ ಸರ್ಕಾರ- ಚೊರ್ಲ ಘಾಟ್‌ನಲ್ಲಿ ಭಾರಿ ಗಾತ್ರದ ವಾಹನ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಬೆಳಗಾವಿ: ಗೋವಾ ಮತ್ತು ಕರ್ನಾಟಕ ರಾಜ್ಯಗಳ ಗಡಿಭಾಗದ ಚೊರ್ಲ ಘಾಟ್ ಮೂಲಕ ನಿತ್ಯವೂ ಕರ್ನಾಟಕದಿಂದ ಸಂಚಾರಿಸುತ್ತಿದ್ದ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಗೋವಾ ಸರ್ಕಾರವು ಭಾರೀ ಟೀಕೆಗೆ ಗುರಿಯಾಗಿತ್ತು. ಸದ್ಯ ಬೆಳಗಾವಿ ಲಾರಿ ಮಾಲೀಕರ ಸಂಘದ ಮನವಿಗೆ ಸ್ಪಂದಿಸಿ ವಾಹನ ಸಂಚಾರ ಕುರಿತು ಇದೀಗ ಪರಿಷ್ಕೃತ ಆದೇಶವನ್ನು ಹೊರಡಿಸಿದೆ.

ಹೌದು. ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ ಪ್ರತಿ ನಿತ್ಯ ನೂರಾರು ಭಾರಿ ಸರಕು ವಾಹನಗಳ ಸಂಚಾರ ಮಾಡುತ್ತಿದ್ದವು. ಕಳೆದ ಎರಡು ದಿನಗಳ ಹಿಂದೆ ಗೋವಾ ಸರ್ಕಾರ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ ಕಾರಣ ನೂರಾರು ಲಾರಿಗಳು ಕೇರಿ ಚೆಕ್ ಪೊಸ್ ಬಳಿ ತಡೆದು ನಿಲ್ಲುಸುತ್ತಿದ್ದರು. ಈ ಆದೇಶವನ್ನು ಖಂಡಿಸಿ ಬೆಳಗಾವಿ ಲಾರಿ ಮಾಲೀಕರ ಸಂಘ ಬೆಳಗಾವಿಯ ಡಿಸಿ ಹಾಗೂ ಎಸ್ಪಿ ಅವರಿಗೆ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮತ್ತು ಎಸ್ಪಿ ಸಂಜೀ ಪಾಟೀಲ ಅವರ ವಿಶೇಷ ಪ್ರಯತ್ನ ಮತ್ತು ಕಾಳಜಿಯಿಂದಾಗಿ ಗೋವಾ ಸರ್ಕಾರದ ಮನವೊಲಿಸಲು ಯಶಸ್ವಿಯಾಗಿದೆ. ಇದೀಗ ಗೋವಾ ಸರ್ಕಾರ ಭಾರಿ ವಾಹನಗಳ ನಿರ್ಬಂಧ ಕುರಿತು ಇದೀಗ ಪರಿಷ್ಕೃತ ಆದೇಶ ಹೊರಡಿಸಿದ್ದು, ವಾಹನಗಳಿಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಸಂಚರಿಸಲು ಪರವಾನಿಗೆ ನೀಡಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

Edited By : Nagesh Gaonkar
PublicNext

PublicNext

28/09/2022 09:45 am

Cinque Terre

22.2 K

Cinque Terre

0

ಸಂಬಂಧಿತ ಸುದ್ದಿ