ಬೆಳಗಾವಿ: ನಮ್ಮ ದೇಶದಲ್ಲಿ ಯಾವುದರಿಂದಲೂ ಧರ್ಮವನ್ನು ಹೊರ ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಹೇಳಿದರು.
ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು, ಕನ್ನೇರಿ ಮಠ ಹತ್ತಾರು ವಿಶ್ವವಿದ್ಯಾಲಯ, ನೂರಾರು ಸಂಘ ಸಂಸ್ಥೆಗಳು ಕೆಲಸ ಮಾಡ್ತಿದೆ. ಒಂದು ದೊಡ್ಡದಾದ ಸರ್ಕಾರ ಮಾಡಬೇಕಾದ ಕೆಲಸ ಒಂದು ಸೀಮಿತವಾದ ಜಾಗದಲ್ಲಿ ಮಾಡ್ತಿರೋದು ಹೆಮ್ಮೆ ಎನಿಸುತ್ತದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಪೂಜ್ಯ ಶ್ರೀಗಳು ತಮ್ಮ ಆಧ್ಯಾತ್ಮ ಶಕ್ತಿಯಿಂದ ಸಾಮಾಜಿಕ ಮನೋಭಾವ ಕಾರಣಕ್ಕೆ ಮಾಡಿ ತೋರಿಸುತ್ತಿದ್ದಾರೆ. ಇಲ್ಲಿ ಏನಿದೆ ಅಂತಾ ಪಟ್ಟಿ ಮಾಡುವುದಕ್ಕಿಂತ ಏನಿಲ್ಲ ಅಂತಾ ಪಟ್ಟಿ ಮಾಡಿದ್ರೆ ಬೇಗ ಮುಗಿದು ಹೋಗಿ ಬಿಡುತ್ತದೆ ಎಂದರು.
ಗೋಶಾಲೆ ಕೇವಲ ಪೂಜೆಗೆ ಸೀಮಿತವಾಗಿಲ್ಲ. ಆರ್ಥಿಕತೆಗೆ ಗೋಶಾಲೆ ಹೇಗೆ ಬೆಳೆಸಬಹುದು ಎಂಬ ವ್ಯವಹಾರಿಕ ಪ್ರಜ್ಞೆ ಕೂಡ ಇದೆ. ಕೃಷಿ ವಿಜ್ಞಾನ ಕೇಂದ್ರವಿದೆ. ಭಾರತದ ಆಧ್ಯಾತ್ಮಿಕ ವಿಜ್ಞಾನ ಪರಂಪರೆಯನ್ನು ತೋರಿಸುವ ಆಲಯಗಳಿವೆ. ಶ್ರೀಗಳ ಸಾಮರ್ಥ್ಯದಿಂದ ಸುತ್ತಮುತ್ತಲಿನ 250ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಪ್ರವೇಶಾತಿ ಹಾಜರಾತಿ ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿದೆ ಎಂದು ತಿಳಿಸಿದರು.
PublicNext
11/10/2022 01:37 pm