ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: ಉಗಾರ ಖುರ್ದ ಪಟ್ಟಣ ಬಸ್ ತಂಗುದಾಣ ಅವ್ಯವಸ್ಥೆ ಆಗರ!; ಪ್ರಯಾಣಿಕರ ಬೇಸರ

ಕಾಗವಾಡ (ಬೆಳಗಾವಿ): ಗ್ರಾಮಗಳಿಗೆ ಬಸ್ ನಿಲ್ದಾಣ ಇರುವುದೇ ಅಪರೂಪ. ಅಂತದ್ದರಲ್ಲಿ, ಆ ಊರಿನ ಶುಗರ್ಸ್ ಕಾರ್ಖಾನೆ ಊರಿನ ಜನರಿಗಾಗಿ ಬಸ್ ನಿಲ್ದಾಣ ನಿರ್ಮಿಸಿದ್ದರು. ಆದರೆ, ಇದೀಗ ಅದು ಹಾಳು ಕೊಂಪೆಯಾಗಿ ಪ್ರಯಾಣಿಕರು ಪರದಾಡುವ ದುಸ್ಥಿತಿ ಒದಗಿದೆ. ಅದ್ಯಾವ ಊರು ಅಂತೀರಾ, ಹಾಗಾದ್ರೆ ಈ ಸ್ಟೋರಿ ನೋಡಿ...

ಹೌದು... ಹೀಗೆ ಎಲ್ಲೆಂದರಲ್ಲಿ ಶಿಥಿಲಗೊಂಡ ಮೇಲ್ಚಾವಣಿ, ಒಳಗಡೆ ಮಳೆನೀರು, ಪ್ರಾಣಿ-ಪಕ್ಷಿಗಳ ಮಲ-ಮೂತ್ರ, ಜನರು ಕೂರಲಾಗದ ನೋಟ ಕಂಡು ಬಂದಿದ್ದು ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದ ಬಸ್ ನಿಲ್ದಾಣದಲ್ಲಿ. 25 ವರ್ಷಗಳ ಹಿಂದೆ ಗ್ರಾಮಸ್ಥರ ಅನುಕೂಲಕ್ಕಾಗಿ ಉಗಾರ ಶುಗರ್ಸ್ ಲಿ. ನಿರ್ಮಿಸಿದ ಬಸ್ ನಿಲ್ದಾಣ ಈ ರೀತಿಯಾಗಿ ಪಾಳು ಬಿದ್ದಿದೆ.

ಇದರಿಂದಾಗಿ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಬಸ್ ನಿಲ್ದಾಣಕ್ಕೆ ಬರುವಂತಾಗಿದೆ. ನಿಲ್ದಾಣದೊಳಗೆ ಮಳೆನೀರು ಸೋರುತ್ತಿದೆ. ಜತೆಗೆ ಹಂದಿ- ನಾಯಿಗಳ ಕಾಟಕ್ಕೆ ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ. ರಾತ್ರಿಯಾದರೆ ಸಾಕು ಅನೈತಿಕ ಚಟುವಟಿಕೆ ತಾಣ, ಕುಡುಕರ ಅಡ್ಡೆಯಾಗಿ ಬದಲಾಗುತ್ತೆ.

ಒಟ್ಟು 28 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದ ಬಸ್ ನಿಲ್ದಾಣದಲ್ಲಿ ನಿತ್ಯ ನೂರಾರು‌ ಬಸ್ ಸಂಚರಿಸುತ್ತವೆ. ಮೀರಜ್- ಜಮಖಂಡಿ, ಅಥಣಿ, ಬೆಳಗಾವಿ, ವಿಜಯಪುರ, ಬಾಗಲಕೋಟ, ಬಾದಾಮಿ, ಪುಣೆ, ಮುಂಬೈ ನಗರ ಹೀಗೆ ಕರ್ನಾಟಕ- ಮಹಾರಾಷ್ಟ್ರ ಪ್ರಯಾಣಕ್ಕೆ ಇದು ಪ್ರಮುಖ ನಿಲ್ದಾಣವಾಗಿದೆ. ಸಂಬಂಧಪಟ್ಟವರು ಕೂಡಲೇ ಈ ನಿಲ್ದಾಣವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

Edited By : Shivu K
PublicNext

PublicNext

14/09/2022 09:57 am

Cinque Terre

36.88 K

Cinque Terre

0

ಸಂಬಂಧಿತ ಸುದ್ದಿ