ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ನಾಲ್ವರ ಬಾಳಿಗೆ ಬೆಳಕಾದ ಅಥಣಿಯ ಯುವಕ ಪ್ರಶಾಂತ

ಅಥಣಿ: ಮನೆಯಲ್ಲಿ ಜಾರಿಬಿದ್ದು ಗಂಭೀರವಾಗಿ ಗಾಯಗೊಂಡ ಯುವಕನ ಮೆದುಳು ನಿಷ್ಕ್ರೀಯಗೊಂಡಿತ್ತು. ಹೀಗಾಗಿ ಆತನ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಯುವಕ ಪ್ರಶಾಂತ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ.

ಅಥಣಿ ಪಟ್ಟಣದಲ್ಲಿ ಮಂಗಳವಾರ ದಿನಾಂಕ 27 ರಂದು ಪ್ರಶಾಂತ ವಿಠ್ಠಲ ಮಲ್ಲೆವಾಡಿ (ಪೂಜಾರಿ) ಎಂಬ 30 ವರ್ಷದ ಯುವಕ ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಮರಳುವ ವೇಳೆ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಪೋಷಕರು ಅಥಣಿಯ ಅನ್ನಪೂರ್ಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಕೋಮಾಗೆ ತಲುಪಿದ್ದ ಪ್ರಶಾಂತ ಎಷ್ಟೇ ಚಿಕಿತ್ಸೆ ನೀಡಿದರೂ ಆತ ಚೇತರಿಸಿಕೊಳ್ಳಲಿಲ್ಲ. ಅಲ್ಲದೆ ಅವರ ಮಿದುಳು ಕೂಡ ನಿಷ್ಕ್ರಿಯಗೊಂಡಿತ್ತು.

ಈ ವೇಳೆ ಯುವಕನ ಪೋಷಕರು ಈ ವಿಷಯ ತಿಳಿದು ಮಗ ಜೀವಂತವಾಗಿ ಉಳಿಯೋದಿಲ್ಲ ಎಂದು ಮನಗಂಡು ಡಾ. ಅವಿನಾಶ ನಾಯಿಕ, ರಜನ ಸೋಮಯ್ಯ ಅವರ ಸಲಹೆ ಮೇರೆಗೆ ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಈ ಮೂಲಕ ನಾಲ್ಕೈದು ಜನರ ಜೀವಕ್ಕೆ ಬೆಳಕು‌ ನೀಡುವ ಮೂಲಕ, ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದರು.

ಇನ್ನು ಮೃತ ಪ್ರಶಾಂತನ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುತ್ತಿದ್ದಂತೆಯೇ ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ, ಪ್ರಶಾಂತನ ದೇಹದಿಂದ ಲೀವರ್, 2 ಕಿಡ್ನಿ, ಹೃದಯ, ಚರ್ಮ, ಕಣ್ಣುಗಳನ್ನು ತೆಗೆದು ಬೇರೆಯವರಿಗೆ ಹಾಕಬಹುದು ಎಂದು ವೈದ್ಯ ಡಾ ಸಂತೋಷ ಪಾಟೀಲ ಅವರು ತಿಳಿಸಿದರು.

ಅದೇನೇ ಇರಲಿ ಪ್ರಶಾಂತ ವಿಠ್ಠಲ ಮಲ್ಲೆವಾಡಿ(ಪೂಜಾರಿ) ತನ್ನ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸುತ್ತಿದ್ದರೂ ಅವರ ಪೋಷಕರು ಮಗನ ಸಾವಿನ ನೋವಿನಂಚಿನಲ್ಲೂ ಕೈಗೊಂಡ ಅಂಗಾಂಗ ದಾನದ ನಿರ್ಧಾರ, ನಾಲ್ಕೈದು ಜನರ ಬಾಳಿಗೆ ಬೆಳಕು ನೀಡಿದ್ದು ನಿಜಕ್ಕೂ ಶ್ಲಾಘನೀಯ ನಿರ್ಧಾರ.

ಸಂತೋಷ ಬಡಕಂಬಿ, ಪಬ್ಲಿಕ್‌ನೆಕ್ಸ್ಟ, ಅಥಣಿ.

Edited By : Somashekar
PublicNext

PublicNext

30/09/2022 12:11 pm

Cinque Terre

28.84 K

Cinque Terre

0

ಸಂಬಂಧಿತ ಸುದ್ದಿ