ಬೆಳಗಾವಿ : ಖಾನಾಪೂರ ತಾಲ್ಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ದೇಶಪಾಂಡೆ ಸ್ಟಾರ್ಟಪ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ ಆರಿ ಎಂಬ್ರಾಯಿಡರಿ ವರ್ಕ್ಸ್ ವಿಜೇತರಿಗೆ, ಎಸ್ ಎಸ್ ಎಜುಕೇಷನ್ ಫೌಂಡೇಷನ್ ಹನಿವೆಲ್ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ್ ಶ್ರೀ ಸುಭಾಷ್ ಗುಳಶೆಟ್ಟಿ, ದೇಶಪಾಂಡೆ ಸ್ಟಾರ್ಟಪ್ ಸಿಇಓ ಶ್ರೀ ಅರವಿಂದ ಚಿಂಚೂರೆ, ಬ್ಯಾಂಕ್ ಆಫ್ ಇಂಡಿಯಾ ಪಾರಿಶ್ವಾಡದ ವ್ಯವಸ್ಥಾಪಕರಾದ ಶ್ರೀ ಶ್ರೀನಾಥ್, ಲೀಡ್ ಬ್ಯಾಂಕಿನ್ ವ್ಯವಸ್ಥಾಪಕರಾದ ಶ್ರೀ ಸುರೇಶ ಕುಲಕರ್ಣಿ, ನಬಾರ್ಡ್ ಬ್ಯಾಂಕಿನ್ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಕೆ ಭಾರಧ್ವಾಜ್, ದೇಶಪಾಂಡೆ ಸ್ಟಾರ್ಟಪ್ ನ ಹಿರಿಯ ನಿರ್ದೇಶಕರಾದ ಶ್ರೀ ವಿಜಯ ಪುರೋಹಿತ, ದೇಶಪಾಂಡೆ ಸ್ಟಾರ್ಟ್ಪಪ್ನ ಪ್ರಾಜೆಕ್ಟ್ ವ್ಯವಸ್ಥಾಪಕರಾದ ವೀರಯ್ಯ ಹಿರೇಮಠ್ ಪಾರಿಶ್ವಾಡ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
29/09/2022 07:27 pm