ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಅನಾರೋಗ್ಯದಿಂದ ಯೋಧ ಸಾವು : ಶೋಕಸಾಗರದಲ್ಲಿ ಗ್ರಾಮಸ್ಥರು

ಬೆಳಗಾವಿ : ಅನಾರೋಗ್ಯದಿಂದ ಧೂಪದಾಳ ಗ್ರಾಮದ ಯೋಧ ಪುಟ್ಟು ಖಾನಪ್ಪ ಕುರಿ (28) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಪುಟ್ಟು ಖಾನಪ್ಪ ಕುರಿ ಲಾತೂರನಲ್ಲಿ ಸಿಆರ್ ಪಿಎಫ್ ನಲ್ಲಿ ತರಬೇತಿ ಸಂದರ್ಭದಲ್ಲಿಯೇ ಗಂಟಲಿನ ತೊಂದರೆಗೆ ಒಳಗಾಗಿ ಲಾತೂರಲ್ಲೆ ಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಾಂಪೂಜೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಯೋಧ ಮೃತಪಟ್ಟಿದ್ದಾರೆ.

ಮೃತಯೋಧ ಒಂದೂವರೆ ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೈನಿಕನಿಗೆ ತಂದೆ. ತಾಯಿ, ತಮ್ಮ, ಅಮ್ಮ ಇದ್ದಾರೆ. ಪುಟ್ಟು ಕುರಿ ಅವರ ಪಾರ್ಥಿವ ಶರೀರ ಮಂಗಳವಾರ ಬೆಳಿಗ್ಗೆ ಸಿಆರ್ ಪಿಎಫ್ ವಾಹನದ ಮೂಲಕ ಬೆಂಗಳೂರಿನಿಂದ ಮಂಗಳವಾರ ಸಾಯಂಕಾಲ ಸ್ವಗ್ರಾಮವಾದ ಧೂಪದಾಳ ಗ್ರಾಮಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ ಯಕ್ಕುಂಡಿಯ ಕುಮಾರೇಶ್ವರ ವಿರಕ್ತಮಠದ ಶ್ರೀ ಪಂಚಾಕ್ಷರ ಸ್ವಾಮಿಜಿ, ಸವದತ್ತಿ ತಹಶೀಲದ್ದಾರ ಗಂಗನಗೌಡ ಬ ಜಕ್ಕನಗೌಡ್ರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

Edited By : Nagesh Gaonkar
PublicNext

PublicNext

20/09/2022 10:58 pm

Cinque Terre

39.14 K

Cinque Terre

2

ಸಂಬಂಧಿತ ಸುದ್ದಿ