ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕರ್ತವ್ಯದಲ್ಲಿರುವಾಗಲೇ ಯೋಧನಿಗೆ ಹೃದಯಾಘಾತ: ಸ್ವಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಬೆಳಗಾವಿ: ಸತತ 13 ವರ್ಷಗಳಿಂದ ಆತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಇನ್ನೂ ದೇಶ ಸೇವೆ ಮಾಡಬೇಕು ಅಂದುಕೊಂಡಿದ್ದ. ಆದರೆ ಯೋಧನಿಗೆ ಕ್ರೂರ ವಿಧಿ ಅವಕಾಶ ನೀಡಲಿಲ್ಲ. ಕರ್ತವ್ಯದಲ್ಲಿದ್ದಾಗ ಗೋಕಾಕ್ ತಾಲೂಕಿನ ‌ಮೇಲ್ಮಟ್ಟಿ ಗ್ರಾಮದ ಯೋಧ ಶಂಕರ ಯಲಿಗಾರ(೨೭) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಂಕರ ಯಲಿಗಾರ ಅವರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಸೇವೆ ಸಲ್ಲಿರುತ್ತಿರುವಾಗಲೇ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಬುಧವಾರ ಅವರ ಪಾರ್ಥಿವ ಶರೀರವನ್ನು ಗೋಕಾಕ ತಾಲೂಕಿನ ಮೇಲ್ಮಟ್ಟಿ ಗ್ರಾಮಕ್ಕೆ ತರಲಾಗಿದೆ. ಈ ವೇಳೆ ಕುಟುಂಬಸ್ಥರು ಮತ್ತು ಸಂಬಂಧಿಕರ ಜೊತೆ ಇಡೀ ಗ್ರಾಮವೇ ಕಣ್ಣೀರ ಕೋಡಿ ಹರಿಸಿದೆ.

ತಮ್ಮ ಗ್ರಾಮದ ಹೆಮ್ಮೆಯ ಪುತ್ರನ ಪಾರ್ಥೀವ ಶರೀರವನ್ನು ಗ್ರಾಮದಲ್ಲಿ ತೆರೆದ ವಾಹನದಲ್ಲಿ, ಹೂಗಳನ್ನು ತೂರಿ ಮೆರವಣಿಗೆ ಮಾಡಿ ವೀರ ಯೋಧನ ದೇಶ ಸೇವೆಯನ್ನು ನೆನಪು ಮಾಡಿಕೊಂಡ್ರು. ಗೋಕಾಕ್ ತಾಲೂಕು ಆಡಳಿತದಿಂದ ಮೇಲ್ಮಟ್ಟಿ ಗ್ರಾಮದ‌ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ‌ಮೃತ ಯೋಧ ಶಂಕರ ಯಾಲಿಗಾರ ಅವರ ಅಂತ್ಯಕ್ರಿಯೆ ಮಾಡಲಾಯಿತು.

ಶಂಕರ ಯಲಿಗಾರ ಅಂತ್ಯಕ್ರಿಯೆಯಲ್ಲಿ ಸ್ಥಳೀಯರು, ಅಕ್ಕಪಕ್ಕದ ಗ್ರಾಮದ ಜನರು ಭಾಗಿಯಾಗಿದ್ರು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು..

Edited By : Nagesh Gaonkar
PublicNext

PublicNext

14/09/2022 03:51 pm

Cinque Terre

24.96 K

Cinque Terre

0

ಸಂಬಂಧಿತ ಸುದ್ದಿ