ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಸಿಟಿ ಸ್ಕ್ಯಾನ್ ವಿಭಾಗದ ಸಿಬ್ಬಂದಿ ಸರಕಾರಿ ಕೆಲಸ ಬಿಟ್ಟು ಖಾಸಗಿ ಕೆಲಸಕ್ಕೆ ಹೋಗಿರುವ ಕಾರಣ ಎಮರ್ಜೆನ್ಸಿ ವಾರ್ಡ್ ನಲ್ಲಿ ರೋಗಿಗಳ ಪರದಾಡುವಂತಾಗಿದೆ.
ತುರ್ತಾಗಿ ಸ್ಕಾನ್ ಆಗಬೇಕಾಗಿದ್ದ ರೋಗಿಗಳು ಸ್ಕ್ಯಾನ್ ಸೆಂಟರ್ ಬಳಿ ಒಂದು ಗಂಟೆಗೂ ಹೆಚ್ಚು ಸಮಯ ನಿಂತರೂ ಯಾವ ಒಬ್ಬ ಸಿಬ್ಬಂದಿಯೂ ಕಾಣಲಿಲ್ಲ. ಸ್ಕ್ಯಾನ್ ಸಿಟಿ ಬಾಗಿಲು ಲಾಕ್ ಮಾಡಿಕೊಂಡು ಹೋದ ಕಾರಣ ತುರ್ತಾಗಿ ಸ್ಕ್ಯಾನ್ ಆಗಬೇಕಿದ್ದ ರೋಗಿಗಳು ಅಕ್ಷರಶಃ ಪರದಾಡುವಂತಾಗಿತ್ತು.
ಸುಮಾರು ಐದಾರು ಗಂಭಿರ ಪರಿಸ್ಥಿತಿಯ ರೋಗಿಗಳು ಆಸ್ಪತ್ರೆಯ ಸಿಟಿ ಸ್ಕ್ಯಾನ್ ಸೆಂಟರ್ ಮುಂದೆ ಲೈನ್ ಹಚ್ಚಿ ತಮ್ಮ ನೋವು ಯಾತನೆ ನಡುವೆ ಕಾಯಬೇಕಾಯಿತು. ಮಾಧ್ಯಮದವರು ಬಂದ ಸುದ್ದಿಯನ್ನು ತಿಳಿದು ಸಿಬ್ಬಂದಿ ಸ್ಕ್ಯಾನ್ ಸೆಂಟರ್ ಗೆ ಆಗಮಿಸಿ ತಮ್ಮ ಕಾಯಕವನ್ನು ಆರಂಭಿಸಿದರು. ತುರ್ತು ಸ್ಕ್ಯಾನ್ ಇದೆ ಅಂತ ಮನವಿ ಮಾಡಿದ್ರೂ ಸ್ಪಂದಿಸದ ಸಿಬ್ಬಂದಿ ವಿರುದ್ಧ ರೋಗಿಗಳ ಸಂಬಂಧಿಕರ ಆಕ್ರೋಶ ಎಲ್ಲಡೆ ಕಂಡು ಬಂತು.
PublicNext
27/09/2022 10:20 am