ಅಥಣಿ : ಒಬ್ಬರು ದಾನ ಮಾಡಿದ ರಕ್ತ ಇನ್ನೊಬ್ಬರನ್ನೂ ಬದುಕಿಸುತ್ತದೆ. ಇದೇ ನಿಜವಾಗಿ ನಾವು ಸಮಾಜಕ್ಕೆ ಸಲ್ಲಿಸುವ ಕೊಡುಗೆಯಾಗಿದೆ. ಸಾಮಾಜಿಕ ಕಾರ್ಯಗಳ ಮೂಲಕ ಪ್ರತಿಯೊಬ್ಬರು ಪರೋಪಕಾರ ಗುಣ ಬೆಳಸಿಕೊಳ್ಳಬೇಕೆಂದು ಸತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅನೂಪ ಗಸ್ತಿ ಹೇಳಿದರು.
ಅವರು ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಅಥಣಿ ತಾಲೂಕಾ ಕಲ್ಯಾಣ ಸೇವೆ, ಕೇಂದ್ರ ಸತ್ತಿ ಹಾಗೂ ವಿವಿಧ ಮಿತ್ರರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ರಕ್ತ ದಾನ ಶಿಬಿರದಲ್ಲಿ ಅವರು ಮಾತನಾಡಿ ಆಯೋಗ್ಯಯುತವಾದ ವ್ಯಕ್ತಿ ರಕ್ತದಾನ ಮಾಡಿದರೆ ಮಾಡಿದರೆ ಯಾವುದೇ ತೊಂದರೆಯಾಗುವುದಿಲ್ಲ ಜೀವನದಲ್ಲಿ ಒಮ್ಮೆಯಾದರೂ ಮಾಡಬೇಕೆಂದು ಪ್ರತಿಯೊಬ್ಬರೂ ರಕ್ತದಾನ ಅವರು ಹೇಳಿದರು.
ಅನಂತರ ಸತ್ತಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಬಿ. ಆರ್. ಪಾಟೀಲ ಮಾತನಾಡಿ ಆಕಸ್ಮಿಕವಾಗಿ ಎದುರಾಗುವ ಅಪಘಾತಗಳಲ್ಲಿ ವ್ಯಕ್ತಿಗಳು ಘಾಯಗೊಂಡಾಗ ಅವರಿಗೆ ರಕ್ತ ಬೇಕಾಗುತ್ತದೆ, ರಕ್ತ ಲಭ್ಯವಿದ್ದರೆ ರಕ್ತ ಭಂಡಾರದಲ್ಲಿ ಜೀವ ಬದುಕಿಸಬಹುದಾಗಿದೆ. ರಕ್ತದಾನ ಮಾಡುವುದರಿಂದ ಜೊತೆಗೆ ಇನ್ನೊಂದು ಜೀವ ಉಳಿಸುವ ಪುಣ್ಯ ಬರುತ್ತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿ.ಡಿ.ಒ ಎಂ.ಪಿ.ಗುರವ, ಗ್ರಾಮದ ಹಿರಿಯ ಮುಖಂಡ ಬಿ.ಆರ್.ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಹಳ್ಳೂರ, ಉಪಾಧ್ಯಕ್ಷ ಬಸವರಾಜ ದಳವಾಯಿ, ಡಾ ಶ್ರೀಶೈಲ ಚೌಗಲಾ, ಮಹಾಂತೇಶ ವಾಲಿಕಾರ, ಕಾಕಾಸಾಬ ರುದ್ರಗೌಡರ, ಮಲ್ಲಯ್ಯ ಮಠಪತಿ, ಮಹಾದೇವಿ ಗುಳೇದರ, ಚನ್ನಬಸು ಗೌಡವಾಡೆ, ಕೆ.ಬಿ.ಜಂಗನ್ನವರ, ಬಸವರಾಜ ಜಗದೇವ, ವಿವೇಕ ಮಠದ, ರಾಕೇಶ ಪಾಟೀಲ, ಶೇಖರ ಬಾಡಗಿ, ಶ್ರೀಶೈಲ ಎಂ.ವಾಯ್.ಸಿಂಗೆ, ಆಶಾ ಜಕ್ಕಪ್ಪನವರ, ಕಾರ್ಯಕರ್ತೆಯರು, ವಿವಿಧ ಸಂಘಗಳ ಸದಸ್ಯರು ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
16/09/2022 06:47 am