ಬೆಳಗಾವಿ : ಒಂಟಿಯಾಗಿ ಓಡಾಡುವ ಜನಸಾಮಾನ್ಯರೇ ಈ ಕೋತಿಗೆ ಟಾರ್ಗೆಟ್, ಒಂದಲ್ಲ, ಎರಡಲ್ಲ ಬರೋಬ್ಬರಿ ಒಂಬತ್ತಕ್ಕೂ ಅಧಿಕ ಜನರ ಮೇಲೆ ಈ ಕೋತಿ ಡೆಡ್ಲಿ ಅಟ್ಯಾಕ್ ಮಾಡಿದೆ. ಸದ್ಯ ಈ ಕೋತಿಯ ಕಾಟಕ್ಕೆ ಹೈರಾಣಾಗಿರುವ ನಿವಾಸಿಗಳು, ಪ್ರಾಣಭಯದಲ್ಲೇ ಜೀವನ ನಡೆಸುವಂತಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನೇಕಾರ ಪೇಠನಲ್ಲಿ ಒಂಟಿಯಾಗಿ ಓಡಾಡುವ ನಿವಾಸಿಗಳ ದೇಹದ ಭಾಗಕ್ಕೆ ಮನಬಂದಂತೆ ಕೋತಿ ಅಟ್ಯಾಕ್ ಮಾಡುತ್ತಿದೆ. ಈ ಕೋತಿಯು ಪ್ರತಿನಿತ್ಯ ಅಟ್ಯಾಕ್ ಮಾಡುತ್ತಿರುವುದರಿಂದ ಸ್ಥಳೀಯ ನಿವಾಸಿಗಳು, ಕೋಲು ಹಿಡಿದು ಪ್ರಾಣಭಯದಲ್ಲೇ ಜೀವನ ನಡೆಸುತ್ತಿದ್ದಾರೆ.
ಇದೇ ವಿಚಾರಕ್ಕೆ ಅರಣ್ಯ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ದೂರು ನೀಡಿದರು. ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಒಂಟಿಯಾಗಿ ಓಡಾಡುವ ಜನಸಾಮಾನ್ಯರೇ ಈ ಕೋತಿಯ ಟಾರ್ಗೆಟ್ ಆಗಿದ್ದು, ಈಗಾಗಲೆ ಹಲವಾರು ಜನರಿಗೆ ಅಟ್ಯಾಕ್ ಮಾಡಿದೆ. ಹಾಗಾಗಿ ಅರಣ್ಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಈ ಡೆಡ್ಲಿ ಕೋತಿ ಹಿಡಿದು ಜನರಿಗೆ ಒಳಿತು ಮಾಡಬೇಕಾಗಿದೆ.
-ಪ್ರಲ್ಹಾದ ಪೂಜಾರಿ ಬೆಳಗಾವಿ
PublicNext
03/11/2024 11:43 am