ಬೆಳಗಾವಿ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವು ಮಂಡನೆ ಆಗಿದೆ ಹೊರತು ಅಂಗಿಕಾರ ಆಗಿಲ್ಲ, ನವೆಂಬರ್ 1ರ ಒಳಗಾಗಿ ವಿಧೇಯಕವು ಅಂಗಿಕಾರ ಆಗಬೇಕು ಎಂದು ಹಿರಿಯ ಸಾಹಿತಿಗಳು, ಚಿಂತಕರು, ಹಾಗೂ ಕನ್ನಡಪರ ಹೋರಾಟಗಾರು ಒತ್ತಾಯಿಸಿದ್ದಾರೆ.
ಇಂದು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ಹಿರಿಯ ಸಾಹಿತಿಗಳು, ಚಿಂತಕರು, ಹಾಗೂ ಕನ್ನಡಪರ ಹೋರಾಟಗಾರು, ನವೆಂಬರ್ 1ರ ಒಳಗೆ ಸುಗ್ರೀವಾಜ್ಞೆ ಮೂಲಕ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವು ಸರ್ಕಾರ ಜಾರಿಗೆ ತರಬೇಕು ಎಂದು ಸರ್ಕಾರದ ಮೇಲೆ ಒತ್ತಾಯ ಹೇರಿದ್ದಾರೆ.
ಈ ವಿಧೇಯಕದಲ್ಲಿ ಅನೇಕ ನ್ಯೂನ್ಯತೆಗಳಿವೆ ಅದನ್ನು ಸರಿಪಡಿಸಬೇಕು. ಆಯೋಗದಲ್ಲಿ ನಿವೃತ್ತರಿಗೆ ಸ್ಥಾನ ಕೊಡದೇ ಪ್ರವೃತ್ತರಿಗೆ ಆಧ್ಯತೆ ಕೊಟ್ಟು ಸ್ಥಾನ ನೀಡಬೇಕು. 14ರಂದು ಸಿಎಂ ಭರವಸೆ ನೀಡಿದ್ದರು, ಆದರೆ ಕೆಲವರು ಹಿಂದಿನಿಂದ ಆಟವಾಡಿದರು. ಮಸೂದೆ ಅಂಗೀಕಾರ ಆಗದೆ ವಿಳಂಬ ಧೋರಣೆ ಆಗುವ ಹಾಗೆ ನಾಟಕವಾಡಿದ್ರು. ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ವಾಗ್ದಾಳಿ ನಡೆಸಿದರು.
ಕೇವಲ ಈ ಕಾಯ್ದೆ ಮಂಡನೆ ಮಾತ್ರ ಆಗಿದೆ ಜಾರಿಗೆ ಬಂದಿಲ್ಲ. ಸಿಎಂ ಭರವಸೆ ನೀಡಿದ ಮಾತು ನಡೆಸಿಕೊಡಬೇಕು. ನವೆಂಬರ 1ರ ಒಳಗೆ ಸುಗ್ರೀವಾಜ್ಞೆ ಆಗದಿದ್ದರೆ ಹಾವೇರಿ ಸಮ್ಮೇಳನದಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು. ಈ ವೇಳೆ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸೇರಿದಂತೆ ಇತರರು ಹಾಜರಿದ್ದರು.
PublicNext
01/10/2022 04:37 pm