ಉತ್ತರ ಕರ್ನಾಟಕದಲ್ಲಿ ಮಕ್ಕಳ ಕಳ್ಳರ ವದಂತಿ ಜೋರಾಗಿ ಸದ್ದು ಮಾಡುತ್ತಿದ್ದು ಇದರಿಂದ ಅಮಾಯಕರ ಮೇಲೆ ಗ್ರಾಮಸ್ಥರು ಹಲ್ಲೆ ಮಾಡುತ್ತಿದ್ದಾರೆ. ಸದ್ಯ ಈ ವಿಚಾರ ಪೊಲೀಸರಿಗೂ ತಲೆನೋವಾಗಿದ್ದು ಇದೀಗ ಅಲರ್ಟ್ ಆಗಿರುವ ಪೊಲೀಸರು ಬೃಹತ್ ಜನಜಾಗೃತಿಯನ್ನೇ ಮಾಡುತ್ತಿದ್ದಾರೆ.
ಜಿಲ್ಲಾದಾದ್ಯಂತ ಈಗಾಗಲೇ 1400 ಹಳ್ಳಿಗಳಲ್ಲಿ ತಮ್ಮ ಪೊಲೀಸ್ ಪಡೆಯಿಂದ ಗ್ರಾಮದಲ್ಲಿ, ತಾಲೂಕುಗಳಲ್ಲಿನ ಶಾಲೆಗಳು ಸೇರಿದಂತೆ ಎಲ್ಲಡೆ ಮಕ್ಕಳಗಳ್ಳರ ವದಂತಿ ಬಗ್ಗೆ ಜಾಗೃತಿ ಮೂಡಿಸುತ್ತಿರುವದಕ್ಕೆ ಸಾರ್ವಜನಿಕ ವಲಯದಲ್ಲಿ ಪೊಲೀಸರ ಪ್ರಯತ್ನಕ್ಕೆ ಶ್ಲಾಘನೀಯ ವ್ಯಕ್ತವಾಗುತ್ತಿದೆ.
ಹೌದು ಮಹಾರಾಷ್ಟ್ರದಲ್ಲಿ ಇತ್ತಿಚೀನ ದಿನಗಳಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿ ಇದು ಗಡಿ ಜಿಲ್ಲೆ ಬೆಳಗಾವಿಗೂ ವ್ಯಾಪಿಸಿ ಇಲ್ಲಿಯೂ ಕೂಡ ಹಲವು ಕಡೆಗಳಲ್ಲಿ ಮಕ್ಕಳ ಕಳ್ಳರು ಅಂತಾ ಅಮಾಯಕರ ಮೇಲೆ ಹಲ್ಲೆಗಳು ನಡೆದಿದ್ದವು. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಆರು ಕಡೆಗಳಲ್ಲಿ ಈ ರೀತಿಯ ಘಟನೆಗಳು ನಡೆದಿದ್ದವು. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸರು ಅಲರ್ಟ್ ಆಗಿ ವದಂತಿಗಳ ಬಗ್ಗೆ ದೊಡ್ಡ ಮಟ್ಟದ ಜಾಗೃತಿಗೆ ಕೈಹಾಕಿ ಸಕ್ಸಸ್ ಆಗಿದೆ.
ಶಾಲೆಗಳಲ್ಲಿ ಪ್ರತಿ ಪೊಲೀಸ ಠಾಣೆಯ ಸಿಪಿಐ ಸೇರಿದಂತೆ ಅವರ ಸಿಬ್ಬಂದಿಗಳು ಶಾಲೆಗಳಿಗೆ ಭೇಟಿ ನೀಡಿ 112 ಸಹಾಯವಾಣಿ ಮತ್ತು ಮಕ್ಕಳಗಳ್ಳರ ವದಂತಿಗಳ ಬಗ್ಗೆ ತಿಳಿ ಹೇಳುತ್ತಿದ್ದಾರೆ ಇದಕ್ಕೆ ಶಿಕ್ಷಣ ಇಲಾಖೆಯೂ ಕೂಡಾ ಕೈ ಜೊಡಿಸಿದೆ. ಈ ಪ್ರಯುಕ್ತ ಯಮಕನಮರಡಿ ಸಿಪಿಐ ರಮೇಶ್ ಚಾಯಗೋಳ ಶಾಲೆ, ಮತ್ತು ಬೀದಿ ಬೀದಿಗಳಲ್ಲಿ ಖುದ್ದಾಗಿ ಜಾಗೃತಿ ಮಾಡುತ್ತಿರುವುದಕ್ಕೆ ಶಿಕ್ಷಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
PublicNext
17/09/2022 02:51 pm