ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ದೇವಾನು ದೇವತೆಗಳ ಪೂಜೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ; ಬಾಲಚಂದ್ರ ಜಾರಕಿಹೊಳಿ

ಬೈಲಹೊಂಗಲ: 'ಸಂತರು, ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆದು ಸಮಾಜಮುಖಿಯಾಗಿ ಬೆಳೆಯಬೇಕು. ಬದುಕಿನಲ್ಲಿ ಧಾರ್ಮಿಕ ಚಿಂತನೆ ಬೆಳೆಸಿಕೊಂಡು ಧರ್ಮದ ಹಾದಿಯಲ್ಲಿ ಸಾಗಬೇಕು' ಎಂದು ಅರಭಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಪಟ್ಟಣದ ದುರ್ಗಾಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ದಸರಾ ಮಹೋತ್ಸವ ಆಚರಣೆ ಅಂಗವಾಗಿ ನಡೆದಿರುವ ಮಹಾಚಂಡಿಕಾಯಾಗದಲ್ಲಿ ಪ್ರಾರ್ಥನೆ ಸಲ್ಲಿಸಿ ಅವರು ಮಾತನಾಡಿದರು. 'ದೇವಾನು, ದೇವತೆಗಳ ಪೂಜೆ, ಪ್ರಾರ್ಥನೆ, ಹೋಮಹವನಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಅಂತಹ ಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿದ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಗುರುಗಳಿಗೆ ಕೃತಜ್ಞತೆ' ತಿಳಿಸಿದರು.

ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ನೇತೃತ್ವದಲ್ಲಿ ಹೋಮ, ಹವನ ನೆರವೇರಿತು. ದುರ್ಗಾದೇವಿ ಪ್ರತಿಮೆಯನ್ನು ವಿವಿಧ ಹೂವು ಮಾಲೆ, ಹಣ್ಣುಗಳಿಂದ ಶೃಂಗರಿಸಿ ಪೂಜೆ ಸಲ್ಲಿಸಲಾಯಿತು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಜಾತ್ರ ಕಮೀಟಿ ರಾಜು ಕುಡಸೋಮಣ್ಣವರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಅಡಿವೆಪ್ಪ ಕಾಜಗಾರ, ಮಂಜುನಾಥ ಜ್ಯೋತಿ, ರವಿ ವನ್ನೂರ, ಬಸವರಾಜ ಕಟ್ಟಿಮನಿ ಅನೇಕರು ಇದ್ದರು.

Edited By : Somashekar
Kshetra Samachara

Kshetra Samachara

02/10/2022 08:44 pm

Cinque Terre

5.98 K

Cinque Terre

0

ಸಂಬಂಧಿತ ಸುದ್ದಿ