ಅಥಣಿ: ಮಕ್ಕಳು ಹಿರಿಯರ ನಡೆ ಗಮನಿಸುತ್ತಾರೆ. ಹಾಗಾಗಿ ಕಿರಿಯರಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಹಿರಿಯರು ನಡೆದುಕೊಳ್ಳಬೇಕು ಎಂದು ಅಕ್ಕಲಕೋಟದ ಚನ್ನಬಸವ ಹೇಳಿದ್ದಾರೆ.
ಅವರು ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಚನ್ನಬಸವ ಹಿರೇಮಠದಲ್ಲಿ ನವರಾತ್ರಿ ಉತ್ಸವದ ಸ್ವಾಮೀಜಿ ಸಲಹೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಿಬ್ಬಂದಿ ಮತ್ತು ಡಿ ದರ್ಜೆ ನೌಕರರನ್ನು ಸತ್ಕರಿಸಿ ಅವರು ಮಾತನಾಡಿದರು, ಮಕ್ಕಳು ಮತ್ತು ಯುವ ಜನಾಂಗ ದಾರಿ ತಪ್ಪದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸಮಾಜದ ಮುಖಂಡರ ಮೇಲಿದೆ. ಭಕ್ತರು ಪುರಾಣ ಪ್ರವಚನಗಳಲ್ಲಿ ಪಾಲ್ಗೊಂಡು ಸದ್ಗುಣ - ಅಳವಡಿಸಿಕೊಳ್ಳಬೇಕು ಎಂದರು.
ಅನಂತರ ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ನಮ್ಮ ಮನೆ ಮತ್ತು ಗ್ರಾಮವನ್ನು ನಾವೇ ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ರತಿಯೊಂದಕ್ಕೂ ಸ್ವಚ್ಛತಾ ಸಿಬ್ಬಂದಿಯನ್ನು ದೂರುವಂತಾಗಬಾರದು ಎಂದರು.
ಈ ವೇಳೆ ವಿವೇಕಾನಂದ ಹಳಿಂಗ ಮಹಾರಾಜರು, ಗ್ರಾಪಂ ಅಧ್ಯಕ್ಷ ವಿಲಾಸ್ ಮೋರೆ, ಅಶೋಕ ಇದ್ದರು.
PublicNext
02/10/2022 07:09 pm