ಬೆಳಗಾವಿ: ಒಂದೇ ದಿನ ಎರಡು ಪ್ರತ್ಯೇಕ ದಾಳಿ ನಡೆಸಿ, ಕಂಟ್ರಿ ಸಾರಾಯಿ ಮಾರಾಟ ಮಾಡುತ್ತಿದ್ದ, ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ 20 ಲೀಟರ್ ಕಂಟ್ರಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.
ಸದಾನಂದ ಲಕ್ಷ್ಮಣ ನಾಯಿಕ್, (33) ಹಾಗೂ ರಾಮಪ್ಪ ನಿಂಗರಾಯ್ ಬಂಧಿತರು. ಸದಾನಂದ ಎಂಬ ಆರೋಪಿಯಿಂದ 90 ಲೀಟರ್ ಹಾಗೂ ರಾಮಪ್ಪ ಎಂಬ ಆರೋಪಿಯಿಂದ 20 ಲೀಟರ್ ಕಂಟ್ರಿ ಸಾರಾಯಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರತ್ಯೇಕವಾಗಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಹುಕ್ಕೇರಿ ತಾಲೂಕಿನ ಯಮನಮರಡಿ ಬಳಿ ಪೊಲೀಸರ ದಾಳಿ ಮಾಡಿ, ಅಲದಾಳ ಕ್ರಾಸ್ ಹಾಗೂ ಗುಟಗುದ್ದಿ ಬಳಿ ತಲಾ ಒಬ್ಬೊಬ್ಬ ಆರೋಪಿ ಬಂಧನ ಮಾಡಿದ್ದಾರೆ. ಈ. ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.
Kshetra Samachara
13/10/2022 01:20 pm