ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಇಬ್ಬರು ಕಾಡು ಹಂದಿ ಬೇಟೆಗಾರರ ಬಂಧನ.

ಅಥಣಿ: ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದ ಹೊರವಲಯದಲ್ಲಿ ಕಾಡು ಹಂದಿ ಬೇಟೆಯಾಡುತ್ತಿದ್ದ ಇಬ್ಬರನ್ನು ಬೆಳಗಾವಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಭಾನುವಾರ ಬಂಧಿಸಿ, ಮೂರು ಜೀವಂತ ಕಾಡುಹಂದಿ, ಹಗ್ಗ ಹಾಗೂ ವಿವಿಧ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ರಡೇರಹಟ್ಟಿ ಗ್ರಾಮದ ಸದಾಶಿವ ಬಸವಂತ ಕಾಂಬಳೆ (27), ಅಥಣಿ ಗವಿಸಿದ್ದನಮಡ್ಡಿಯ ನಿವಾಸಿ ಶಿವಾಜಿ ಅಶೋಕ ಭಜಂತ್ರಿ (35) ಬಂಧಿತ ಆರೋಪಿಗಳು, ಕಾಡುಹಂದಿ ಮಾಂಸವನ್ನು ಅಥಣಿ, ಜಮಖಂಡಿ ಸೇರಿ ಮಹಾರಾಷ್ಟ್ರದ ಮಿರಜ, ಸಾಂಗಲಿ ನಗರಗಳಲ್ಲಿ ಮಾರಾಟ ಮಾಡುತ್ತಿದ್ದರು.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗಾವಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ, ಸಿಬ್ಬಂದಿ ಶಿವಾನಂದ ಅರಬೆಂಚಿ, ಮಾರುತಿ ನಾಯಕ, ಕೆ.ಬಿ.ಕಂಠಿ, ಎನ್.ಎಸ್.ನಾಯಕ, ಎಸ್.ಎಸ್.ರೆಡ್ಡಿ ಹಾಗೂ ಉಮೇಶ ಪಟ್ಟೇದ ಕಾರ್ಯಾಚರಣೆಯಲ್ಲಿದ್ದರು .

Edited By : PublicNext Desk
Kshetra Samachara

Kshetra Samachara

11/10/2022 05:04 pm

Cinque Terre

39.16 K

Cinque Terre

0

ಸಂಬಂಧಿತ ಸುದ್ದಿ