ಬೆಳಗಾವಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ವಾಹನ ಸಮೇತ ಸಾಗಿಸುತ್ತಿದ್ದ ವ್ಯಕ್ತಿಯನ್ನು ಖಾನಾಪುರ ಪೋಲಿಸರು ಬಂಧಿಸಿದ್ದಾರೆ.
ಬೆಳಗಾವಿಯ ಫೀರನವಾಡಿ ನಿವಾಸಿ ಜಾಫರ್ ಸಾದಿಕ್ ಮುಜಾವರ್ ಬಂಧಿತ ಆರೋಪಿ. ಬೆಳಗಾವಿ ಗೋವಾ ಹೆದ್ದಾರಿಯ ಪ್ರಭುನಗರ ಬಳಿ 950 ಕೆಜಿ ಅಕ್ಕಿಯನ್ನು ಕೆಎ22 ಸಿ7568 ನಂಬರ್ ಪ್ಲೇಟ್‌ನ ಕಾರ್ಗೊ ರಿಕ್ಷಾದಲ್ಲಿ ಜಾಫರ್ ಸಾದಿಕ್ ಮುಜಾವರ್ ಸಾಗಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಖಾನಾಪುರ ಸಿಪಿಐ ಸುರೇಶ್ ಸಿಂಘ ಅವರು ಆರೋಪಿಯನ್ನು ಬಂಧಿಸಿ, ರಿಕ್ಷಾ ಹಾಗೂ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
01/10/2022 06:46 pm