ಬೆಳಗಾವಿ: ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರ ಬಡಾವಣೆಯಲ್ಲಿ ಶುಕ್ರವಾರ ಬೆಳಗಿನ ಜಾವ ಮನೆ ದರೋಡೆ ಮಾಡಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಭರಣಗಳನ್ನು ಮತ್ತು ಎರಡು ಲಕ್ಷ ರೂಪಾಯಿ ನಗದು ಹಣವನ್ನು ದೋಚಲಾಗಿದೆ.
ಶಾಂತಿನಗರ ಬಡಾವಣೆ ನಿವಾಸಿ ಬಾಬು ಮಹದೇವಪ್ಪ ಪಾಸಲಕರ ಇವರ ಮನೆ ದರೋಡೆಯಾಗಿದ್ದು ರಾತ್ರಿ ಸಮಯ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಈ ಮನೆಯ ಬೀಗ ಮುರಿದು ಮನೆಯಲ್ಲಿರುವ ಬಿರು ಒಡೆದು 15 ತೋಲೆ ಬಂಗಾರದ ಆಭರಣ ಎರಡು ಲಕ್ಷ ನಗದು ರೂಪಾಯಿಗಳನ್ನು ದೋಚಿಕೊಂಡು ಹೋಗಿದ್ದಾರೆ.
ಮನೆಯಲ್ಲಿರುವ ವಸ್ತುಗಳನ್ನೆಲ್ಲ ಚಿಲ್ಲಾ ಪಿಲ್ಲಿ ಮಾಡಲಾಗಿದ್ದು, ಸ್ಥಳಕ್ಕೆ ಸೌದತ್ತಿ ಪಿ ಐ ಕರುಣೇಶ್ ಗೌಡ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೌದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Kshetra Samachara
30/09/2022 03:47 pm