ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ತಾಯಿ-ಮಗಳ ಅನೈತಿಕ ಸಂಬಂಧಕ್ಕೆ ಅಡ್ಡಿ; ತಾಯಿ ಜತೆಗೂಡಿ ಪ್ರಿಯಕರನಿಂದ ತಂದೆಯನ್ನೇ ಕೊಲ್ಲಿಸಿದ ಕುಲಪುತ್ರಿ

ಬೆಳಗಾವಿ: ಕೆಲ ದಿನಗಳ ಹಿಂದೆ ನಗರದ ಕ್ಯಾಂಪ್ ಪ್ರದೇಶದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧಕ್ಕೆ ಅಡಿಯಾಗುತ್ತಾನೆ ಎಂಬ ಕಾರಣಕ್ಕೆ ಹೆಂಡತಿ ಮತ್ತು ಮಗಳು‌ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಹೌದು ಈ ಭಯಾನಕ ದೃಶ್ಯಗಳು ನಗರದ ಕ್ಯಾಂಪ್ ಪ್ರದೇಶದಲ್ಲಿ ಕಳೆದ ಒಂದು ವಾರಗಳ ಹಿಂದೆ ಸುಧೀರ್ ಕಾಂಬಳೆ(57) ಎಂಬುವವರ ಭೀಕರ ಹತ್ಯೆಯಾಗಿತ್ತು. ರಾತ್ರೋರಾತ್ರಿ ದುಷ್ಕರ್ಮಿಗಳು ಆ ಚಿಕ್ಕ ಮನೆಗೆ ನುಗ್ಗಿ ಸುಧೀರನಗೆ ಎಲ್ಲಂದರಲ್ಲಿ ಮಾರಣಾಸ್ತ್ರಗಳಿಂದ ಚುಚ್ಚಿ ಕೊಂದಿದ್ದರೂ ಆತನ ಮಳ್ಳಿಯಂತಿರುವ ಹೆಂಡತಿ ಮತ್ತು ಕುಲಗೆಟ್ಟ ಕುಲಪುತ್ರಿಗೆ ಏನು ಗೊತ್ತಿಲ್ವಂತೆ ಅಪ್ಪನ ಶವದ ಮುಂದೆ ಅಳುವ ನಾಟಕವಾಡಿದ್ದಳು. ಇನ್ನು ಹೆಂಡತಿ ತನ್ನ ಪತಿಯನ್ನು ಯಾರು ಕೊಂದವರು ಅಂತಾ ಶಾಕ್ ನಲ್ಲಿ ಇರುವಂತೆ ನಟಿಸಿದ ನಟ ಭಯಂಕರಿ.

ಆದರೆ ಸತ್ಯ ಯಾವಾಗಲಾದ್ರೂ ಬೆಳಕಿಗೆ ಬರಬೇಕು ಅಲ್ವೆ. ಆ ನಟ ಭಯಂಕರಿ ರೋಹಿಣಿಯ ಹಲಚಲ್ ಮೇಲೆ ಸಂದೇಹವಿಟ್ಟಿದ್ದ, ಪೊಲೀಸರು ಇದೀಗ ಸತ್ಯವನ್ನು ಬಯಲಿಗೆ ತಂದಿದ್ದಾರೆ.

ಇದೀಗ ಹತ್ಯೆ ಪ್ರಕರಣದ ಸಂಬಂಧ ಕೊಲೆಯಾದವನ ಹೆಂಡತಿ ರೋಹಿಣಿ ಕಾಂಬಳೆ, ಆತನ ಮಗಳು ಸ್ನೇಹಾ ಕಾಂಬಳೆ ಹಾಗೂ ಸ್ನೇಹಾಳ ಪ್ರಿಯಕರ್ ಮಹಾರಾಷ್ಟ್ರದ ಪುನಾ ಮೂಲದ ಅಕ್ಷಯ ವಿಠ್ಠಕರ್ (25) ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಬೆಳಗಾವಿ ನಗರದ ನಿವಾಸಿ‌ ಆಗಿರುವ ಸುಧೀರ್ ಕಾಂಬಳೆ (57) ಕುಟುಂಬ ನಿರ್ವಹಣೆಗೆ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲಿ ಭಾರತಕ್ಕೆ ಮರಳಿದ ಸುಧೀರ್ ಬೆಳಗಾವಿಗೆ ಬಂದು ನೆಲೆಸಿದರು. ಆದ್ರೆ, ಗಂಡ ದುಬೈಗೆ ತೆರಳುತ್ತಿದ್ದಂತೆ ಹೆಂಡತಿಗೆ ಮತ್ತೊಬ್ಬನ ಜೊತೆಗೆ ಅನೈತಿಕ ಸಂಬಂಧ ಇದ್ದರೆ ಮಗಳಿಗೆ ಪ್ರಿಯಕರ ಜೊತೆಯಾಗಿದ್ದನು. ಈ ಪತ್ನಿ ಹಾಗೂ ಪುತ್ರಿಯ ಅನೈತಿಕ ಕಳ್ಳಾಟ ಗೊತ್ತಾಗಿ ಅವರುಗಳ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಈ ಸುಧೀರ

ಇದರಿಂದಾಗಿ ಸುಧೀರ್ ನನ್ನು ಮುಗಿಸಬೇಕು ಅಂತಾ ಪಕ್ಕಾ ಪ್ಲ್ಯಾನ್ ಹಾಕಿದ ಇಬ್ಬರು ಕೊಲೆಗಾತಿಯರು‌. ಮಗಳ ಪ್ರಿಯಕರ ಅಕ್ಷಯಗೆ ವಿಷಯ ತಿಳಿಸಿ ಕೊಲೆಗೆ ಸ್ಕೆಚ್ ಹಾಕುತ್ತಾರೆ. ಅದಕ್ಕೆ ಪೂರಕವಾಗಿ ಚಿತ್ರನಟ ರವೀಂದ್ರ ಅಭಿನಯದ ದೃಶ್ಯಂ ಸಿನಿಮಾವನ್ನು ಐದರಿಂ‌ದ ಹತ್ತು ಸಾರಿ ನೋಡಿದ್ದರಂತೆ. ದೃಶ್ಯ ಸಿನಿಮಾ ಮಾದರಿಯಲ್ಲಿಯೇ ಸೆ.17ರಂದು ಕೊಲೆ ಮಾಡಿದ್ದರು. ಅದು ಹೇಗೆ ಕೊಲೆ ಮಾಡಿದ್ದು ಹೇಗೆ ಅಂತಾ ನೀವೆ ಒಮ್ಮೆ ಕೇಳಿ.

Edited By : Shivu K
PublicNext

PublicNext

30/09/2022 10:04 am

Cinque Terre

32.9 K

Cinque Terre

0

ಸಂಬಂಧಿತ ಸುದ್ದಿ