ಬೆಳಗಾವಿ:ಪಕ್ಕದ ಮನೆಯ ಮಹಿಳೆಯ ಸಲುಗೆ ಬೆಳೆಯಲಿಲ್ಲ ಎಂಬ ಉದ್ದೇಶದಿಂದ ಶಾಲೆಗೆ ತೆರಳುತ್ತಿದ್ದ ಬಾಲಕನನ್ನು ಜಮೀನಿಗೆ ಕರೆದೊಯ್ದು ಕೊಲೆ ಮಾಡಿ ಹಿರಣ್ಯಕೇಶಿ ನದಿಗೆ ಎಸೆದಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯನ್ನು ಮಾತನಾಡಿದ ಅವರು, ಶವ ಸಿಕ್ಕಾಗ ಬಾಲಕನ ಗುರುತು ಸಿಗಬಾರದು ಎಂದು ರುಂಡ ಕತ್ತರಿಸಿ ನದಿಗೆ ಎಸೆದು ಸಾಕ್ಷಿ ನಾಶ ಮಾಡುವ ಹುನ್ನಾರ ನಡೆಸಿದ್ದಾನೆ. ಗ್ರಾಮಸ್ಥರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಸೆ.20 ರಂದು ಹುಕ್ಕೇರಿ ಪೊಲೀಸ್ ಠಾಣೆಯ ಗುಡಸ ಗ್ರಾಮದ ಹಿರಣ್ಯಕೇಶಿ ನದಿಯಲ್ಲಿ ಅಪರಿಚಿತ 15 ವರ್ಷದ ಬಾಲಕನ ರುಂಡ ಕತ್ತರಿಸಿದ ಶವ ಪತ್ತೆಯಾಗಿತ್ತು.
ಶವದ ಪಕ್ಕ ಶಾಲಾ ಸಮವಸ್ತ್ರ, ಟೈ ಕಂಡುಬಂದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಯಿತು.
ಶನಿವಾರ ಬೆಳಗ್ಗೆ ಶಾಲೆಗೆ ಹೋಗುತ್ತೇನೆ ಎಂದು ಮನೆಗೆ ಬಾರದೆ ಇರುವ ಕುರಿತು ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದ, ಈ ಬಾಲಕನ ಶವಕ್ಕೆ ಹೋಲುವಂತಿತ್ತು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ ಉಪಸ್ಥಿತರಿದ್ದರು.
PublicNext
27/09/2022 10:47 pm