ಬೆಳಗಾವಿ: ಐಪಿಎಸ್ ಅಧಿಕಾರಿ, ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಸೈಬರ್ ಖದೀಮರು ನಕಲು ಮಾಡಿದ್ದು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಬೆಳಗಾವಿ ಎಸ್‌ಪಿ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ್ ಅವರು ಈ ಹಿಂದೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದರು. ಅದೇ ಹೆಸರಿನ ಖಾತೆಯಲ್ಲಿ ನಕಲಿ ಖಾತೆಯನ್ನು ಮಾಡಿರುವ ಆನ್‌ಲೈನ್ ಖದೀಮರು ವಂಚನೆಗೆ ಯತ್ನಿಸಿದ್ದಾರೆ. ಎಸ್‌ಪಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಜನರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್‌ಗಳಿಗೆ ಮೊದಲಿಗೆ ನಿಮ್ಮದ್ದು ಗೂಗಲ್ ಪೇ ಇದೇಯಾ ಅಂತ ಸಂದೇಶ ರವಾನಿಸುತ್ತಾರೆ. ಅವರ ಮೆಸೇಜ್‌ಗೆ ಯಾರು ರಿಪ್ಲೈ ಮಾಡುತ್ತಾರೋ ಅಂತವರಿಗೆ ಗೂಗಲ್ ಪೇ ಇದ್ದರೆ 7,500 ಹಣ ಹಾಕುವಂತೆ ಮೆಸೇಜ್ ಮಾಡುತ್ತಿದ್ದಾರೆ.
ನಕಲಿ ಖಾತೆ ಸೃಷ್ಟಿಸಿದ ಹಿನ್ನೆಲೆ ಕಾನೂನು ಕ್ರಮಕ್ಕೆ ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಮುಂದಾಗಿದ್ದು ಸಾರ್ವಜನಿಕರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಪಾಲೋವರ್ ಹೊಂದಿರುವವರಿಗೆ ಎಚ್ಚರದಿಂದ ಇರುವಂತೆ ತಿಳಿಸಿದ್ದಾರೆ. ಮತ್ತು ಇದೇ ರೀತಿ ಸಾರ್ವಜನಿಕರ ಯಾವುದಾದರೂ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು ನಕಲು ಮಾಡಿ ಯಾರಾದರೂ ಹಣ ಕೇಳುತ್ತಿದ್ದರೆ ಪೊಲೀಸ್ ಗಮನಕ್ಕೆ ತರಲು ಮನವಿ ಮಾಡಿದ್ದಾರೆ. ಮತ್ತು ಈ ತರಹ ನಕಲಿ ಖಾತೆಗಳು ಸೃಷ್ಟಿಯಾದಗ ತಾಂತ್ರಿಕ ವಿಧಾನಗಳನ್ನು ಬಳಿಸಿ ರಿಪೋರ್ಟ್ ಮಾಡಲು ಮನವಿ ಮಾಡಿದ್ದಾರೆ.
PublicNext
24/09/2022 02:27 pm