ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ!

ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಜನಿಸಿದ ಗಂಡು ನವಜಾತ ಶಿಶುವನ್ನ ನರ್ಸ್ ವೇಷದಲ್ಲಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ಕಳ್ಳಿ ಮಗುವನ್ನು ತೂಕಮಾಡಿಸುವುದಾಗಿ ತಾಯಿ ಮಡಿಲಿನಿಂದ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ.

ಅರ್ಧ ಘಂಟೆ ಕಳೆದರೂ ಮಗು ತಂದು ಕೊಡದ ನರ್ಸ್ ಬಗ್ಗೆ ಅನುಮಾನಗೊಂಡ ಪೋಷಕರು ಗಾಬರಿಗೊಂಡಾಗ ಆಸ್ಪತ್ರೆ ಸಿಬ್ಬಂದಿ ಎಚ್ಚತ್ತು ಅಥಣಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಇನ್ನೂ ಸ್ಥಳಕ್ಕೆ ಆಗಮಿಸಿದ ಅಥಣಿ ಪಿಎಸ್ ಐ ಶಿವಶಂಕರ ಮುಕರಿ ಮಗು ಕಳೆದುಕೊಂಡ ಪೋಷಕರಿಂದ ಮಾಹಿತಿ ಪಡೆದು ಆಸ್ಪತ್ರೆಯ ಸಿಸಿ ಕ್ಯಾಮರಾ ತಪಾಸಣೆ ನಡೆಸುತ್ತಿದ್ದಂತೆ ನರ್ಸ್ ವೇಷದಲ್ಲಿ ಬಂದ ಕಳ್ಳಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ದೃಶ್ಯ ಕಂಡುಬಂದಿದೆ.

ಇನ್ನೂ ಸಿಸಿ ಟಿವಿ ಫೋಟೆಜ್ ಆಧರಿಸಿ ಕಳ್ಳಿಯನ್ನ ಹಿಡಿಯಲು ಅಥಣಿ ಪೊಲೀಸರು ಬಲೆ ಬೀಸಿದ್ದಾರೆ.

Edited By :
PublicNext

PublicNext

21/09/2022 01:39 pm

Cinque Terre

30.39 K

Cinque Terre

1

ಸಂಬಂಧಿತ ಸುದ್ದಿ