ಬೆಳಗಾವಿ: ಮಾರಕಾಸ್ತ್ರಗಳಿಂದ ವ್ಯಕ್ತಿಯ ಬರ್ಬರ ಹತ್ಯೆಗೈದು, ಶವ ಬಿಸಾಕಿ ಹೋದ ದುಷ್ಕರ್ಮಿಗಳು ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಶವ ಬಿಸಾಕಿ ಹೋದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸೂರ ಗ್ರಾಮದಲ್ಲಿ ನಡೆದಿದೆ.
ಹತ್ಯೆಗೋಳಗಾದ ವ್ಯಕ್ತಿಯನ್ನು ಹೊಸೂರ ಗ್ರಾಮದ ನಿವಾಸಿಯಾದ ಪಾಂಡಪ್ಪ ದುಂಡಪ್ಪ ಜಟಕನ್ನವರ (35) ಎಂದು ಗುರುತಿಸಲಾಗಿದೆ. ಬೇರೆಡೆ ಕೊಲೆಗೈದು ಹೊಸೂರ ಗ್ರಾಮದ ರಸ್ತೆಗೆ ನಿರ್ಮಿಸಿರುವ ಸೇತುವೆ ಬಳಿ ಶವ ಬಿಸಾಕಿ ಹೋದ ದುಷ್ಕರ್ಮಿಗಳು ಹೀಗಾಗಿ ಹೊಸೂರ ಗ್ರಾಮದ ರಸ್ತೆ ಸೇತುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವ ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕೂಡಲೇ ಹೊಸೂರ ಗ್ರಾಮಸ್ಥರು ರಾಮದುರ್ಗ ತಾಲೂಕಿನ ಕಟಕೋಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ರಾಮದುರ್ಗ ತಾಲೂಕಾ ಆಸ್ಪತ್ರೆಗೆ ಶವ ರವಾನೆ ಮಾಡಿದ್ದಾರೆ.
PublicNext
20/09/2022 06:11 pm