ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಇದೆಂಥ ಪ್ರೀತಿ? ಪತ್ನಿಯನ್ನು ಕರೆದೊಯ್ಯಲು ಗುಂಡು ಹಾರಿಸಿದ ಗಂಡ

ಅಥಣಿ: ಸಾಕು ಇನ್ನೂ ನಿನ್ನ ತವರಮನೆ ಬಿಟ್ಟು ನನ್ನ ಜೊತೆ ಸಂಸಾರ ಮಾಡು ಬಾ ಇಲ್ಲದಿದ್ದರೆ ನಿನ್ನನ್ನು ಈ ಪಿಸ್ತೂಲ್ ನಿಂದ ಸುಟ್ಟು ಹಾಕುವೆ ಎಂದು ತನ್ನ ಪತ್ನಿಯ ಮೇಲೆ ಪೈರಿಂಗ್ ಮಾಡಿ ಇದೀಗ ಪತಿ ಪೊಲೀಸ್‌ರ ಅತಿಥಿಯಾಗಿರುವ ಘಟನೆ ಅಥಣಿ ತಾಲೂಕಿನ ನಡೆದಿದೆ.

ಹೌದು ತನ್ನ ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಪ್ರೀತಿ ಎಂಬ ಮಹಿಳೆ ತನ್ನ ಪತಿ ಶಿವಾನಂದ ಕಾಲೆಬಾಗ್ ಎಂಬವನನ್ನು ಬಿಟ್ಟು ತನ್ನ ತವರುಮನೆಯಾದ ಅಥಣಿಗೆ ಸೇರಿಕೊಂಡಿದ್ದಳು. ಕಳೆದ ಮೂರು ತಿಂಗಳನಿಂದ ತನ್ನ ಪತ್ನಿಯಿಂದ ದೂರುವಿದ್ದ ಸಿಂದಗಿ ಶಿವಾನಂದಗೆ ತನ್ನ ಪತ್ನಿಯ ಅನಿವಾರ್ಯತೆ ಗೊತ್ತಾಗಿ, ತನಗೆ ತನ್ನ ಹೆಂಡತಿ ಬೇಕೆಂದು ಹಠ ಹಿಡಿದು,

ಸೋಮವಾರ ತಡರಾತ್ರಿ ಅಥಣಿಯ ಪತ್ನಿ ತವರು ಮನೆಗೆ ಬಂದ ಪತಿ ಗಂಡನ ಮನೆಗೆ ಮರಳುವಂತೆ ಒತ್ತಾಯಿಸಿದ್ದೂ ಅಲ್ಲದೆ, ತನ್ನ ರಿವಾಲ್ವರ್ ನಿಂದ ಎರಡು ಸುತ್ತು ಗುಂಡು ಹೊಡೆದು ಕೊಲೆ ಮಾಡುವ ಪ್ರಯತ್ನ ಮಾಡಿದ್ದಾನೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿರುವ ಪ್ರೀತಿ ಅಥಣಿ ಠಾಣೆಯಲ್ಲಿ ದೂರು ನೀಡಿದ್ದು,

ಮಂಗಳವಾರ ಅಥಣಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ರಿವಾಲ್ವರ್ ಮತ್ತು ನಾಲ್ಕು ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ಎಸ್ ಪಿ ಸಂಜೀವ ಪಾಟೀಲ ತಿಳಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

13/09/2022 10:45 am

Cinque Terre

15.96 K

Cinque Terre

0

ಸಂಬಂಧಿತ ಸುದ್ದಿ