ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಗಡಿ ಭಾಗದಲ್ಲಿ ಭಾರಿ ಲಾರಿಗಳ ಪ್ರವೇಶ ನಿಷೇಧಿಸಿದ ಗೋವಾ ಸರ್ಕಾರ; ಅತಂತ್ರದಲ್ಲಿ ಲಾರಿ ಚಾಲಕರು

ಬೆಳಗಾವಿ: ಈ ಹಿಂದೆ ಕರ್ನಾಟಕ ರಾಜ್ಯದ ಬೆಳಗಾವಿಯ ತರಕಾರಿಗಳನ್ನು ಆಮದು ಮಾಡಿಕೊಳ್ಳವ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಇಲ್ಲಿನ ತರಕಾರಿ ವ್ಯಾಪಾರಸ್ಥರು ಹಾಗೂ ರೈತರಿಗೆ ಆಕ್ರೋಶವನ್ನುಂಟು ಮಾಡಿದ್ದ ಗೋವಾ ಸರಕಾರ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಚೋರ್ಲಾ ಮೂಲಕ ಪ್ರತಿ ನಿತ್ಯ ನೂರಾರು ಲಾರಿಗಳು ತೆರಳುತ್ತವೆ. ಆದರೆ ಅಲ್ಲಿಯ ಸರ್ಕಾರ ಇದೀಗ ಭಾರಿ ಲಾರಿಗಳ ಸಂಚಾರ ನಿಷೇಧಿಸಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.

ಭಾರಿ ಲಾರಿಗಳನ್ನು ಗೋವಾ ಪ್ರವೇಶಕ್ಕೆ ನಿಷೇಧ ಹೇರಿರುವ ಹಿನ್ನೆಲೆ ಕರ್ನಾಟಕ ಗೋವಾ ಗಡಿಯಲ್ಲಿ ಸಂಚಾರ ದಟ್ಟಣೆ ಆಗುತ್ತಿದೆ. ಉತ್ತರ ಗೋವಾ ಟ್ರಾಫಿಕ್ ಎಸ್‌ಪಿ ಮನವಿ ಮೇರೆಗೆ‌ ಉತ್ತರ ಗೋವಾ ಡಿಸಿಯಾದ ಮಮು ಹಗೆ ಅವರು ಸೆಪ್ಟೆಂಬರ್ 21ರಂದು ಅಧಿಸೂಚನೆ ಹೊರಡಿಸಿ, ಚೋರ್ಲಾ ಘಾಟ್ ಮೂಲಕ ಗೋವಾ ಪ್ರವೇಶಿಸಲು ಭಾರಿ ಲಾರಿಗಳಿಗೆ ನಿಷೇಧ ಹೇರಿದ್ದಾರೆ.

ಗಡಿ ಭಾಗದ ಕೇರಿ-ಬೆಳಗಾವಿ ರಾಜ್ಯ ಹೆದ್ದಾರಿ 01 ರಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧವನ್ನು 2023ರ ಮಾರ್ಚ್ 19ರವರೆಗೆ ನಿಷೇಧ ಹೇರಲಾಗಿದೆ. ಗೋವಾಗೆ ಸಂಪರ್ಕ ಕಲ್ಪಿಸುವ ರಾಮನಗರ ಗೋವಾ ರಸ್ತೆ ಕಳೆದ ಮೂರು ವರ್ಷಗಳಿಂದ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಚೋರ್ಲಾ ಘಾಟ್ ಮೂಲಕ ವಾಣಿಜ್ಯ ಲಾರಿಗಳು ತೆರಳುತ್ತವೆ.

ರಾಮನಗರ ಮೂಲಕ ಗೋವಾಗೆ ತೆರಳುವ ರಸ್ತೆ ದುರಸ್ತಿ ಆಗುವವರೆಗೂ ಈ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಲಾರಿ ಮಾಲೀಕರು ಆಗ್ರಹಿಸಿದ್ದಾರೆ. ಕಾರವಾರ ಮೂಲಕ ಗೋವಾಗೆ ತೆರಳಲು 250 ಕಿಲೋಮೀಟರ್ ಆಗುತ್ತದೆ. ಅಷ್ಟು ಬಾಡಿಗೆ ನಮಗೆ ಸಿಗಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಭಾರಿ ಲಾರಿಗಳ ನಿಷೇಧ ಹಿನ್ನೆಲೆ ಉತ್ಪನ್ನ, ಕಟ್ಟಡ ಕಾಮಗಾರಿ ವಸ್ತು ಸೇರಿ ವಿವಿಧ ಸರಕು ಸಾಗಿಸುತ್ತಿದ್ದ ಲಾರಿ ಸ್ಥಗಿತಗೊಂಡಿವೆ. ನಿನ್ನೆ ರಾತ್ರಿಯಿಂದ ಚಾಲಕರು ಲಾರಿಗಳ ಜೊತೆ ನಿಂತಲ್ಲೇ ನಿಂತಿದ್ದಾರೆ.

Edited By : Manjunath H D
PublicNext

PublicNext

26/09/2022 08:59 pm

Cinque Terre

35.72 K

Cinque Terre

1

ಸಂಬಂಧಿತ ಸುದ್ದಿ