ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಲೇ ಭಲೇ ಕಿಲಾರಿ.. ನಿನಾದೆ ಆದಾಯದ ದಾರಿ!? ಜೋಡಿ ಹೋರಿ ಲಕ್ಷಾಂತರ ರೂ.ಗೆ ಮಾರಾಟ

ಬೆಳಗಾವಿ: ರೈತ ನಮ್ಮ ದೇಶದ ಬೆನ್ನೆಲುಬು, ಅದೇ ರೈತನಿಗೆ ಬೆನ್ನೆಲುಬಾಗಿರೋದು ಹೋರಿಗಳು ಎತ್ತು ಆಕಳಗಳು. ಅವನ ಜೀವನೋಪಾಯಕ್ಕಾಗಿ ಈ ಜಾನುವಾರುಗಳು ಆತನಿಗೆ ಸದಾ ಕಲ್ಪ ವೃಕ್ಷ ಇದ್ದಂತೆ. ಅದೇ ರೀತಿಯಾಗಿ ಇಲ್ಲಿಯೋಬ್ಬ ರೈತ ತನ್ನ ಹೋರಿಗಳನ್ನು ಲಕ್ಷ ಲಕ್ಷಕ್ಕೆ ಮಾರಾಟ ಮಾಡಿ ಸುದ್ದಿಯಲ್ಲಿದ್ದಾನೆ. ಅರೇ ಎಷ್ಟು ಲಕ್ಷ ಅಂತೀರಾ ನೀವು ಕೇಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಿ.

ಹೌದು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮದ ರೈತ ಧನಪಾಲ ಭೂಪಾಲ ಉಪ್ಪಿನ ಅವರ ಜೋಡಿ ಕಿಲಾರಿ ಹೋರಿಗಳು ಕಂಕಣವಾಡಿಯಲ್ಲಿ ಜರುಗಿದ ಭವ್ಯ ಕಿಲಾರಿ ಹೋರಿಗಳ ಪ್ರದರ್ಶನದಲ್ಲಿ ಎಲ್ಲರ ಮನಸೂರೆಗೊಂಡು ಪ್ರಥಮ ಬಹುಮಾನ ಗಿಟ್ಟಿಸಿಕೊಂಡಿದ್ದವು.

ಆ ಕಿಲಾರಿ ಜೋಡಿ ಹೋರಿಗಳ ಪ್ರದರ್ಶನ ಕಂಡು ಮಹಾರಾಷ್ಟ್ರ ಪೂನಾದ ಬೃಹತ್ ಉದ್ಯಮಿ ಮಹೇಶ್ ದಾದಾ ಚೊಂಗೆ ರವರು 4,55,000ಕ್ಕೆ ಖರೀದಿಸಿದ್ದಾರೆ. ಇದರಿಂದ ಕರ್ನಾಟಕ-ಮಹಾರಾಷ್ಟ್ರ ಭಾಗದ ರೈತರು ಅಚ್ಚರಿಪಡುವಂತಾಗಿದೆ. ಪ್ರೀತಿಯಿಂದ ಮನೆಯ ಮಕ್ಕಳಂತೆ ಪಾಲನೆ ಮಾಡಿದ ರೈತ ವಲ್ಲದ ಮನಸ್ಸಿನಿಂದ ಕಿಲಾರಿ ಜೋಡಿ ಹೋರಿಗಳನ್ನು ಬೀಳ್ಕೊಟ್ಟಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

20/09/2022 09:45 pm

Cinque Terre

6.8 K

Cinque Terre

0