ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾನಕ ನೀಡುವ ಜಾಗದಲ್ಲಿ ಅಕ್ರಮ ಮದ್ಯ ಮಾರಾಟ : ಬಸವಣ್ಣನ ಭಕ್ತರಿಗೆ ಇದೆಂತ ಸಂಕಟ

ಅಥಣಿ : ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು ಅಬಕಾರಿ ಇಲಾಖೆ ವಿರುದ್ಧ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನ ಶಿವನುರು ಗ್ರಾಮದ ಹೊರವಲಯದ ಶಿವನೂರ ಕ್ರಾಸ್ ನಲ್ಲಿ ಬೆಳ್ಳಂ ಬೆಳಿಗ್ಗೆ 7:00 ಗಂಟೆಗೆ ಅಕ್ರಮ ಮದ್ಯ ಮಾರಾಟ ಶುರುವಾಗಿದೆ. ಶ್ರಾವಣ ಸೋಮವಾರ ನಿಮಿತ್ಯ ಸುಕ್ಷೇತ್ರ ಖಿಳೆಗಾಂವಿ ಬಸವಣ್ಣನ ಸನ್ನಿಧಿಗೆ ಕಾಲ್ನಡಿಗೆ ಮೂಲಕ ಬರುವ ಭಕ್ತರಿಗೆ ಪಾನಕ ಕೊಡುವ ದಾರಿಯಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Edited By : PublicNext Desk
Kshetra Samachara

Kshetra Samachara

25/08/2024 11:09 am

Cinque Terre

6.84 K

Cinque Terre

0