ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಗಾರದಲ್ಲಿ ಮೊಸಳೆ ಪ್ರತ್ಯಕ್ಷ, ಅಧಿಕಾರಿಗಳ ಭೇಟಿ

ಕಾಗವಾಡ: ಕೃಷ್ಣಾನದಿ ನೀರಿನ ಹಿನ್ನಿರಿನಿಂದ ಉಗಾರ ಗ್ರಾಮದ ಸೇತುವೆ ಹತ್ತಿರ ಮೊಸಳೆ ಪ್ರತ್ಯಕ್ಷವಾಗಿದ್ದು ಇಲ್ಲಿಯ ಜನರಲ್ಲಿ ಭಯ ಉಂಟಾಗಿದೆ. ಮೊಸಳೆ ಬಗ್ಗೆ ಮಾಹಿತಿ ತಿಳಿದ ತಕ್ಷಣದಲ್ಲಿ ಸ್ಥಳೀಯ ಶಾಸಕ ರಾಜು ಕಾಗೆ ಹಾಗೂ ನೂತನವಾಗಿ ಅರಣ್ಯ ವಲಯ ಅಧಿಕಾರಿಗಳೆಂದು ಅಧಿಕಾರ ಸ್ವೀಕರಿಸಿದ ಅಥಣಿ ತಾಲೂಕ ಅರಣ್ಯ ಇಲಾಖೆಯ ಅಧಿಕಾರಿ ರಾಕೇಶ ಅರ್ಜುನವಾಡೆ ಭೇಟಿನೀಡಿ ಮೊಸಳೆ ಸೆರೆ ಹಿಡಿಯಲು ಎಲ್ಲ ವ್ಯವಸ್ಥೆ ಕೈಗೊಂಡಿದ್ದಾರೆ.

ಬುಧವಾರ ರಂದು ಉಗಾರ ಗ್ರಾಮದ ಖುದಾಬಕ್ಷ ಮುಲ್ಲಾ ಇವರ ತೋಟದಲ್ಲಿ ಕೃಷ್ಣಾ ನದಿ ನೀರಿನ ಹಿನ್ನೀರನಲ್ಲಿ ಮೊಸಳೆ ಕಂಡಿತು. ಇವರು ಕೂಡಲೇ ಶಾಸಕ ರಾಜು ಕಾಗೆಯವರಿಗೆ ಮಾಹಿತಿ ನೀಡಿದರು. ಅವರು ಯಾವುದೇ ಸಮಯ ಕಳೆಯದೆ ತಕ್ಷಣೆ ಅರಣ್ಯ ವಲಯ ಅಧಿಕಾರಿಗಳನ್ನು ಕರೆದು ಪ್ರತ್ಯ ಕ್ಷವಾಗಿ ಭೇಟಿನೀಡಿ ಎಲ್ಲ ಮಾಹಿತಿ ಪಡೆದುಕೊಂಡರು.

ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಉಳಿದು ಮೊಸಳೆ ಸರೆ ಹಿಡಿಯುವ ವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಅಧಿಕಾರಿಗಳು ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಅವರ ನೇಮಕಾತಿ ಮಾಡಿದ್ದಾರೆ.

ಕಳೆದ 18 ದಿನಗಳಿಂದ ಕೃಷ್ಣಾ ನದಿಗೆ ಬಂದಿರುವ ಮಹಾಪೂರ ನೀರಿನಲ್ಲಿ ಕಾಗವಾಡ ತಾಲೂಕಿನ ಉಗಾರ ಬುದ್ರುಕ-ಉಗಾರ ಖುರ್ದ ಮಧ್ಯೆಯಿ ರುವ ಸೇತುವೆ ನದಿಯ ಹಿನ್ನಿರಿನಲ್ಲಿ ಮುಳುಗಡೆ ವಾಗಿದೆ. ಎರಡು ಗ್ರಾಮಗಳ ಜನರಿಗೆ ಹೋಗಿ ಬರಲು ಸುಮಾರು 20 ಕಿಮೀ ಸುತ್ತಾ ಬಳಿಸಿ ಬಂದು ಹೋಗುತ್ತಿದ್ದಾರೆ. ಇವತ್ತು ಬೆಳಿಗ್ಗೆ ನೀರು ಇಳಿಮು ಖವಾಗಿದ್ದು ಸಂಚಾರ ಸೇವೆ ಪ್ರಾರಂಭಗೊಂಡಿದೆ.

ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ತಾಲೂಕ ಅರಣ್ಯ ಇಲಾಖೆಯ ವಲಯ ರಾಕೇಶ ಅರ್ಜುನವಾಡೆ ಇವರು ನದಿಯ ಹಿನೀರಿನಲ್ಲಿ ಬಲೆ ಹಾಕಿಸಿದ್ದು ಮೊಸಳೆ ಸೆರೆ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮೊಸಳೆ ಸೆರೆ ಹಿಡಿಯುವ ಬಗ್ಗೆ ಅಧಿಕಾರಿಗಳು, ರೈತರು, ಸಾರ್ವಜನಿಕರು ಹೆದರಬೇಡಿರಿ ಎಂದು ಧೈರ್ಯ ತುಂಬಿದ್ದಾರೆ. ಅರಣ್ಯ ಇಲಾಖೆಯ ಉಪ ಅಧಿಕಾರಿ ಪ್ರಶಾಂತ ಗಂಗಧರ, ಎ.ವೈ.ದಿತ ಸ್ಥಳದಲ್ಲಿ ಉಳಿದು ಕೊಂಡಿದ್ದಾರೆ. ಶಾಸಕರೊಂದಿಗೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೊಡೆ, ವಸಂತ ಖೋತ, ಅಣ್ಣಪ್ಪಾ ಖೋತ, ರಾಜು ಮದನೆ, ಕುಮಾರ ಪಾಟೀಲ, ನಾಸಿರ ಮುಲ್ಲಾ, ಗುಲಾಭಕ್ಷಿ ಮುಲ್ಲಾ, ಸೇರಿದಂತೆ ಅನೇಕರು ಇದ್ದರು.

Edited By : PublicNext Desk
Kshetra Samachara

Kshetra Samachara

08/08/2024 05:45 pm

Cinque Terre

4.38 K

Cinque Terre

0