ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಲಾಸಿಸ್ ಸೋರಿಕೆ- ವಾಹನ ಸ್ಕೀಡ್; ಓರ್ವ ಸಾವು!

ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೇಲೆ ಮೊಲಾಸಿಸ್ ಸೋರಿಕೆಯಿಂದ ವಾಹನಗಳು ಸ್ಕಿಡ್ ಆಗಿ ಸರಣಿ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಮೇಲೆ ಲಾರಿಯಲ್ಲಿ ಸಾಗಿಸುತ್ತಿದ್ದ ಮೊಲಾಸಿಸ್ ಸೋರಿಕೆಯಿಂದ ಸರಣಿ ಅಪಘಾತವಾಗಿವೆ. ಟೆಂಪೋ ಪಲ್ಟಿಯಾಗಿ ಟೆಂಪೋ ಚಾಲಕ ಸಾವನೊಪ್ಪಿದ್ದಾನೆ. ನಿಪ್ಪಾಣಿ ನಿವಾಸಿ ತಾನಾಜಿ ಬಸವಣ್ಣಿ ಗೋಡಚೆ (42) ಮೃತ ದುರ್ದೈವಿ. ಸರಣಿ ಅಪಘಾತದಲ್ಲಿ ಕಾರು,ಎರಡು ಬೈಕ್ ಸೇರಿದಂತೆ ಐದಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ.

ಈ ಕುರಿತು ಸಂಕೇಶ್ವರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

03/10/2022 11:01 pm

Cinque Terre

20.63 K

Cinque Terre

1

ಸಂಬಂಧಿತ ಸುದ್ದಿ