ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರ ಘಾಟ್ ನಲ್ಲಿ ಬೈಕ್ ಹಾಗೂ ಬುಲೆರೋ ವಾಹನದ ನಡುವೆ ಡಿಕ್ಕಿಯಾಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮುಳ್ಳೂರ ಗ್ರಾಮದ ನಿವಾಸಿ ಶಿವಾನಂದ ಹನಮಂತ ಕುಂಬಾರ (28) ಎಂದು ಗುರುತಿಸಲಾಗಿದೆ
ರಾಮದುರ್ಗದಿಂದ ಮುಳ್ಳೂರು ಕಡೆಗೆ ಹೋಗುತ್ತಿರುವ ಬೈಕ್ ಸವಾರ ಹಾಗೂ ಬುಲೋರೋ ವಾಹನ ಮುಳ್ಳೂರು ಘಾಟಿನ ಇನ್ನೊಂದು ರಸ್ತೆಯಲ್ಲಿ ರಾಮದುರ್ಗದ ಕಡೆಗೆ ಬರುತ್ತಿರುವ ಸಮಯದಲ್ಲಿ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.ಓರ್ವಬೈಕ್ ಸವಾರ ಮೃತಪಟ್ಟಿದ್ದು ಬೈಕ್ ನಲ್ಲಿ ಇದ್ದ ಇನೊಬ್ಬ ಹಿಂಬದಿ ಸವಾರನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
24/09/2022 09:54 pm